ಜಿಲ್ಲೆ

ಕಾಪು ಕ್ಷೇತ್ರದ ರಸ್ತೆಗಳಿಗೆ ಗುದ್ದಲಿಪೂಜೆ

ಪಡುಬಿದ್ರಿ: ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ 75 ಲಕ್ಷ ರೂ. ಅನುದಾನದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಶನಿವಾರ ಗುದ್ದಲಿಪೂಜೆ ನೆರವೇರಿಸಿದರು.

ಜಂತ್ರ, ಮುದರಂಗಡಿ, ಶಿರ್ವ, ನಿಂಜೂರು, ಹೆಜಮಾಡಿ, ಕೋಡಿ, ಎರ್ಮಾಳು, ಮುದರಂಗಡಿ ಜಿಲ್ಲಾ ಮುಖ್ಯರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.

ಮುದರಂಗಡಿ ಗ್ರಾಪಂ ಉಪಾಧ್ಯಕ್ಷೆ ಮೋಹಿನಿ ಸಿ. ಹೆಗ್ಡೆ, ಸದಸ್ಯರಾದ ರವೀಂದ್ರ ಪ್ರಭು, ಶಿವರಾಮ್ ಭಂಡಾರಿ, ಸ್ಥಳೀಯರಾದ ವಿಶ್ವನಾಥ್ ಶೆಟ್ಟಿ, ಹೆಜಮಾಡಿ ಗ್ರಾಪಂ ಉಪಾಧ್ಯಕ್ಷ ಮೋಹನ್ ಸುವರ್ಣ, ಸದಸ್ಯರಾದ ಶರಣ್ ಮಟ್ಟು, ಪಾಂಡುರಂಗ ಹೆಜಮಾಡಿ, ಪವಿತ್ರಾ ಗಿರೀಶ್, ವಸಂತಿ ವಿನೋದ್, ಜನಾರ್ದನ ಕೋಟ್ಯಾನ್, ನಳಿನಾಕ್ಷಿ, ಸುಜಾತ, ಬಬಿತಾ, ಪ್ರಸಾದ್, ಲಿಲೇಶ್, ಸ್ಥಳೀಯರಾದ ಚಂದ್ರಹಾಸ್, ನಿತಿನ್, ಬಡಾ ಗ್ರಾಪಂ ವ್ಯಾಪ್ತಿಯಲ್ಲಿ ಶಂಕುತಳಾ, ಉಚ್ಚಿಲ ಮಹಾಶಕ್ತಿ ಕೇಂದ್ರದ ಚಂದ್ರಶೇಖರ್ ಕೋಟ್ಯಾನ್ ಮತ್ತಿತರರಿದ್ದರು.