ಹಾವೇರಿ: ತಾಲೂಕಿನ ಕೆರಿಮತ್ತಿಹಳ್ಳಿಯ ಹಾವೇರಿ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೆಂಟರ್‌ಅನ್ನು ಬುಧವಾರ ಕವಿವಿ ಕುಲಪತಿ ಡಾ.ಕೆ.ಬಿ.ಗುಡಸಿ ಉದ್ಘಾಟಿಸಿದರು. ನಂತರ ಗುಡಸಿ ಅವರನ್ನು ಹಾವೇರಿ ಕುಲಪತಿ ಪ್ರೊ.ಸುರೇಶ ಜಂಗಮಶೆಟ್ಟಿ ಸನ್ಮಾನಿಸಿದರು. ಕುಲಸಚಿವರಾದ ಡಾ.ಎಸ್.ಟಿ.ಬಾಗಲಕೋಟಿ, ಡಾ.ವಿಜಯಲಕ್ಷ್ಮೀ ತಿರ್ಲಾಪುರ, ಇತರರಿದ್ದರು.