ಮೈಸೂರು: ಸಿದ್ದಾರ್ಥನಗರ ವಿನಯ ಮಾರ್ಗದಲ್ಲಿರುವ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ (ಕೆಎಸ್‌ಟಿಎ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾನುವಾರ ಟೈಲರ್‌ಗಳಿಗೆ ಗುರುತಿನ ಕಾರ್ಡ್ ವಿತರಿಸಲಾಯಿತು.
ಮಾಜಿ ಉಪ ಮೇಯರ್ ಮಹದೇವಮ್ಮ ಅವರು ಮಹಿಳಾ ಟೈಲರ್‌ಗಳಿಗೆ ಗುರುತಿನ ಕಾರ್ಡ್ ವಿತರಿಸಿ ಶುಭ ಕೋರಿದರು. ಇದೇ ಸಂದರ್ಭದಲ್ಲಿ ಯೋಗ ಗುರು ಪುಟ್ಟಸ್ಟಾಮಣ್ಣ, ಸಿದ್ದಾರ್ಥನಗರ ಕೋ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷೆ ಅರುಣಾಕ್ಷಿ, ವಕೀಲ ಸ್ವಾಮಿ, ಕೆಎಸ್‌ಟಿಎ ಸಿದ್ದಾರ್ಥ ನಗರ ಬಡಾವಣೆ ವಲಯ ಸಮಿತಿ ಅಧ್ಯಕ್ಷೆ ಸುಮಬಾಯಿ, ರಾಘವೇಂದ್ರ ನಗರ ವಲಯ ಸಮಿತಿ ಅಧ್ಯಕ್ಷ ಕೆ. ಜಾನ್ ಅವರನ್ನು ಸನ್ಮಾನಿಸಲಾಯಿತು.
ಸಮಿತಿ ಉಪಾಧ್ಯಕ್ಷೆ ರೇಣುಕಾಬಾಯಿ, ಗೌರವಾಧ್ಯಕ್ಷೆ ಸಿ.ಲಕ್ಷ್ಮಿ, ಕಾರ್ಯದರ್ಶಿ ದಮಯಂತಿ, ಉಪ ಕಾರ್ಯದರ್ಶಿ ಎಂ.ಎಲ್.ಯಮುನಾ, ಬೋಗಾದಿ ವಲಯ ಸಮಿತಿ ಅಧ್ಯಕ್ಷ ಚಂದ್ರಣ್ಣ, ಗೌರವಾಧ್ಯಕ್ಷ ಸಿದ್ದೇಗೌಡ, ರಾಮಕೃಷ್ಣ ನಗರ ವಲಯ ಸಮಿತಿ ಅಧ್ಯಕ್ಷ ಈರಣ್ಣ, ಬೀರಿಹುಂಡಿ ವಲಯ ಸಮಿತಿ ಕಾರ್ಯದರ್ಶಿ ಪುಷ್ಪ, ರಾಜೇಂದ್ರ ನಗರ ವಲಯ ಸಮಿತಿ ಅಧ್ಯಕ್ಷ ಕೆ.ಎಸ್.ಶಿವಕುಮಾರ್, ಸತ್ಯನಗರ ವಲಯ ಸಮಿತಿ ಸಂಘಟನಾ ಕಾರ್ಯದರ್ಶಿ ಸಂಧ್ಯಾರಾಣಿ, ರೀಟಾ, ಸಿದ್ದಾರ್ಥ ನಗರ ವಲಯ ಸಮಿತಿ ಸಂಘಟನಾ ಕಾರ್ಯದರ್ಶಿ ರಾಣಿ ಇತರರು ಇದ್ದರು.