ಚಿಕ್ಕಮಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವ ತನಕ ಮುಷ್ಕರ ಕೈಬಿಡುವುದಿಲ್ಲವೆಂದು ಪಟ್ಟು ಹಿಡಿದಿರುವುದರಿಂದ ಶನಿವಾರವೂ ಯಾವುದೇ ಬಸ್ಗಳು ರಸ್ತೆಗಿಳಿಯಲಿಲ್ಲ.
ಬೆಳಗ್ಗಿನಿಂದಲೇ ನಿಗಮದ ಬಸ್ ನಿಲ್ದಾಣದಲ್ಲಿ ಮುಷ್ಕರ ನಿರತರಾದ ನೌಕರರು ಸರ್ಕಾರ ತಮ್ಮ ಬೇಡಿಕೆಗಳಿಗೆ ಸ್ಪಂದಿಸದ ಹೊರತು ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲವೆಂದು ಹೇಳಿದರು. ಬಸ್ ನಿಲ್ದಾಣದ ಒಳಭಾಗದಲ್ಲಿ ಅಡುಗೆ ತಯಾರಿಸಲು ಮುಂದಾದಾಗ ಅಧಿಕಾರಿಗಳು ಆಕ್ಷೇಪಿಸಿದರೆಂದು ಹೊರ ಭಾಗದಲ್ಲೇ ಅಡುಗೆ ತಯಾರಿಸಿ ಮಧ್ಯಾಹ್ನ ಊಟ ಮಾಡಿದರು. ನೌಕರರಲ್ಲದೆ ಅಲ್ಲಿದ್ದ ಇತರ ಕೆಲವರಿಗೆ ಊಟ ಒದಗಿಸಿದರು.
ಸಂವಿಧಾನ ರಕ್ಷಣಾ ಸಮಿತಿ ಕೃಷ್ಣಮೂರ್ತಿ, ಗೌಸ್ ಮುನೀರ್, ಕಾರ್ವಿುಕ ಸಂಘಟನೆ ಶೇಖರ್, ನಾರಾಯಣ್, ಕೃಷ್ಣಪ್ಪ ಹಾಗೂ ಕೃಷ್ಣ ಮತ್ತಿತರರು ಮುಷ್ಕರಕ್ಕೆ ಸಾಥ್ ನೀಡಿದರು.