ಜಿಲ್ಲೆ

ಕೆಎಸ್ಸಾರ್ಟಿಸಿ ಬಸ್ ಚಾಲಕನ ಹತ್ಯೆ ಯತ್ನ

ಮಂಗಳೂರು: ಕೆಎಸ್ಸಾರ್ಟಿಸಿ ಬಸ್‌ಗೆ ಸ್ಕೂಟರ್ ಅಡ್ಡ ಇಟ್ಟು ಚಾಲಕನನ್ನು ಎಳೆದು ಹಾಕಿ ಚೂರಿಯಿಂದ ಇರಿಯಲು ಯತ್ನಿಸಿದ ಆರೋಪಿಯನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಡ್ಯಾರ್ ಕಣ್ಣೂರು ನಿವಾಸಿ ಸೋಹಿಫ್(19) ಬಂಧಿತ. ಪುತ್ತೂರು ಕೆಎಸ್ಸಾರ್ಟಿಸಿ ಡಿಪೋ ಚಾಲಕ ರಾಜು ಗಜಕೋಶ ಅವರು ಪುತ್ತೂರಿನಿಂದ ಸ್ಟೇಟ್‌ಬ್ಯಾಂಕ್‌ಗೆ ಶುಕ್ರವಾರ ಬೆಳಗ್ಗೆ ಬಸ್ ಚಲಾಯಿಸಿಕೊಂಡು ಬರುತ್ತಿದ್ದಾಗ ಸೋಹಿಫ್ ಸ್ಕೂಟರನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದಿದ್ದು, ನಗರದ ಪಡೀಲ್ ರೈಲ್ವೆ ಮೇಲ್ಸೇತುವೆ ಬಳಿ ತಲುಪಿದಾಗ ಸ್ಕೂಟರ್ ಅಡ್ಡ ಇಟ್ಟು ಬಸ್ ತಡೆದು ನಿಲ್ಲಿಸಿದ್ದಾನೆ. ಚಾಲಕನಿಗೆ ಅವಾಚ್ಯ ಶಬ್ದದಿಂದ ಬೈದು ಚೂರಿಯಿಂದ ಇರಿಯಲು ಯತ್ನಿಸಿದ್ದಾನೆ. ಈ ಸಂದರ್ಭ ರಾಜು ಅವರು ಹಿಂದಕ್ಕೆ ಸರಿದು ಇರಿತದಿಂದ ತಪ್ಪಿಸಿಕೊಂಡಿದ್ದಾರೆ. ಈ ಬಗ್ಗೆ ಚಾಲಕ ಕಂಕನಾಡಿ ಪೊಲೀಸರಿಗೆ ದೂರು ನೀಡಿದ್ದಾರೆ.