ಕಿಕ್ಕೇರಿ ಹೋಬಳಿಯ ಬೋಳಮಾರನಹಳ್ಳಿ ಗ್ರಾಮಕ್ಕೆ ಚನ್ನರಾಯಪಟ್ಟಣ ತಾಲೂಕು ಕೇಂದ್ರದಿಂದ ಸಾರಿಗೆ ವಾಹನಕ್ಕೆ ಬುಧವಾರ ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣ ಚಾಲನೆ ನೀಡಿದರು. ಎಚ್.ಟಿ. ಮಂಜು, ಸಿ.ಎನ್. ಪುಟ್ಟಸ್ವಾಮಿಗೌಡ, ಬಿ.ಎಂ. ಕಿರಣ್ ಇತರರು ಇದ್ದರು. 
ಜಿಲ್ಲೆ

ಬೋಳಮಾರನಹಳ್ಳಿಗೆ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ

ಮಾದೇಶ್ ತಿ.ನರಸೀಪುರ

ಕಿಕ್ಕೇರಿ: ಗ್ರಾಮೀಣ ಪ್ರದೇಶದಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ನಾಗರಿಕರು ಹೆಚ್ಚಾಗಿ ಪ್ರಯಾಣಿಸುವಂತೆ ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ ಸಲಹೆ ನೀಡಿದರು.

ಹೋಬಳಿಯ ಬೋಳಮಾರನಹಳ್ಳಿ ಗ್ರಾಮಕ್ಕೆ ಚನ್ನರಾಯಪಟ್ಟಣ ತಾಲೂಕು ಕೇಂದ್ರದಿಂದ ನಿತ್ಯ ಬಸ್ ಓಡಾಡಲು ನೂತನ ಬಸ್‌ಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ಚನ್ನರಾಯಪಟ್ಟಣದಿಂದ ಬೆಳಗ್ಗೆ 7.30ಕ್ಕೆ ಹೊರಟು ಅನೆಗೊಳ, ಗೌಡೇನಹಳ್ಳಿ, ಅಂಚೆಬೀರನಹಳ್ಳಿ, ಬೋಳಮಾರನಹಳ್ಳಿ ಕೊಪ್ಪಲು ಮಾರ್ಗವಾಗಿ ಬೋಳಮಾರನಹಳ್ಳಿ ಗ್ರಾಮಕ್ಕೆ ನಿತ್ಯ ಬಸ್ ಸಂಚರಿಸಲಿದೆ. ಗ್ರಾಮಸ್ಥರ ಬಹುದಿನಗಳ ಬೇಡಿಕೆ ಇದಾಗಿದೆ. ಬಸ್ ಸೇವೆ ಕಲ್ಪಿಸಲಾಗಿದೆ. ಗ್ರಾಮಸ್ಥರು ಸದ್ಬಳಕೆ ಮಾಡಿಕೊಳ್ಳಿ. ಬಸ್ ಪ್ರಯಾಣ ಸೌಲಭ್ಯ ತಮ್ಮ ಗ್ರಾಮಕ್ಕೆ ಉಳಿಯಲು ಸರ್ಕಾರಿ ಬಸ್‌ನಲ್ಲಿಯೇ ಓಡಾಡಬೇಕು ಎಂದರು.

ಶಾಸಕ ಎಚ್.ಟಿ. ಮಂಜು ಮಾತನಾಡಿ, ಗ್ರಾಮೀಣ ಪ್ರದೇಶದ ಎಲ್ಲೆಡೆ ಶಾಲೆ, ಕಾಲೇಜಿನ ವಿದ್ಯಾರ್ಥಿಗಳು, ನಾಗರಿಕರಿಗೆ ಅನುಕೂಲವಾಗಲು ಅಗತ್ಯವಾದ ಸ್ಥಳಗಳಿಗೆ ಬಸ್ ಸೌಲಭ್ಯಕ್ಕೆ ಗಮನಹರಿಸಲಾಗುವುದು. ಸಾರಿಗೆ ಇಲಾಖೆಗೆ ನಷ್ಟವಾಗದಂತೆ ನೋಡಿಕೊಳ್ಳುವುದು ನಾಗರಿಕರ ಕರ್ತವ್ಯ ಎಂದು ಹೇಳಿದರು.

ರಾಜ್ಯ ಸಹಕಾರ ಮಾರಾಟ ಮಹಾಮಂಡಲ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ, ಅನೆಗೊಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಎಂ. ಕಿರಣ್, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಮಾಜಿ ನಿರ್ದೇಶಕ ಬಿ.ಎಸ್. ಮಂಜುನಾಥ್, ಪುಟ್ಟಸ್ವಾಮಿ, ಚನ್ನರಾಯಪಟ್ಟಣ ಬಸ್ ಡಿಪೋ ಮ್ಯಾನೇಜರ್ ನೂತನ್, ಚಾಲಕ ಮಂಜುನಾಥ್ ಇತರರು ಇದ್ದರು.