ಐದಳ್ಳಿ ಗ್ರಾಮದ ಬಳಿ ರಸ್ತೆ ಬದಿ ನಿಂತಿರುವ ಕೆಎಸ್‌ಆರ್‌ಟಿಸಿ ಬಸ್. 
ಜಿಲ್ಲೆ

ಕೆಎಸ್‌ಆರ್‌ಟಿಸಿ ಬಸ್ ಡೋರ್ ಗಟ್ಟಿ ಗ್ಯಾರಂಟಿ ಇಲ್ಲ

ಎಸ್.ಎನ್.ರವೀಂದ್ರ

ಆಲ್ದೂರು: ಐದಳ್ಳಿ ಸಮೀಪ ಮಹಿಳೆ ಕೆಎಸ್‌ಆರ್‌ಟಿಸಿ ಬಸ್ ಹತ್ತುವ ವೇಳೆ ಡೋರ್‌ನ ಲಾಕ್ ಮುರಿದಿದ್ದರಿಂದ ಮಹಿಳೆ ಕೆಳಗೆ ಬಿದ್ದು ತೀವ್ರ ಗಾಯಗಳಾಗಿವೆ.

ಮಂಗಳವಾರ ಚಿಕ್ಕಮಗಳೂರಿನಿಂದ ಶೃಂಗೇರಿಗೆ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ್ನು ಶಕುಂತಲಾ ಎಂಬುವವರು ಹತ್ತುವಾಗ ಡೋರ್‌ನ ಲಾಕ್ ಮುರಿದಿದೆ. ಆಯ ತಪ್ಪಿದ ಮಹಿಳೆ ನೆಲಕ್ಕೆ ಬಿದ್ದಿದ್ದಾರೆ. ಅವರಿಗೆ ಆಲ್ದೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.