ಜಿಲ್ಲೆ

ಕೆಎಸ್ ಆರ್ ಟಿಸಿ ಬಸ್​ ಡಿಕ್ಕಿ ಆರೋಗ್ಯ ಇಲಾಕೆ ನೌಕರ ಸಾವು

ರಾಮನಗರ : ತಾಲೂಕಿನ ಮಾಗಡಿ ರಸ್ತೆ, ತಿಮ್ಮಸಂದ್ರ ಗೇಟ್​ ಬಳಿ ಕೆಎಸ್​ಆರ್​ಟಿಸಿ ದ್ವಿಚಕ್ರ ವಾಹನ ಡಿಕ್ಕಿಯಾಗಿ ಆರೋಗ್ಯ ಇಲಾಖೆ ನೌಕರ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಸಂಜಯ್​ (40) ಮೃತಪಟ್ಟ ದುರ್ದೈವಇ. ಮಾಗಡಿ ಸಾರ್ವಜನಿಕ ಆರೋಗ್ಯ ಇಲಾಖೆಯಲ್ಲಿ ಪ್ರಯೋಗಶಾಲಾ ತಂತ್ರಜ್ಞರಾಗಿ ಕೆಲಸ ನಿರ್ವಹಿಸುತ್ತಿದ್ದು ಸಂಜಯ್​ ರಾಮನಗರ ಐಜೂರಿನಲ್ಲಿ ವಾಸವಾಗಿದ್ದರು. ಒಂದು ಮಗು ಇದ್ದು, ಪತ್ನಿ ಕೂಡ ರಾಮನಗರದ ರಾಯರದೊಡ್ಡಿ ನಗರ ಆರೋಗ್ಯ ಕೇಂದ್ರದಲ್ಲಿ ಪ್ರಯೋಗಶಾಲಾ ತಂತ್ರಜ್ಞರಾಗಿದ್ದಾರೆ. ಸಂಜಯ್​ ಮೂಲತಃ  ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನವರು.

ಕೆಲಸ ಮುಗಿಸಿ ರಾಮನಗರಕ್ಕೆ ಬರುವಾಗ ಮಾಗಡಿ ರಸ್ತೆ ತಿಮ್ಮಸಂದ್ರ ಗೇಟ್​ ಬಳಿಯ ವಿದ್ಯುತ್​ ಪ್ರಸರಣ ಉಪ ಕೇಂದ್ರದ ಮುಂಭಾಗ ರಾಮನಗರದಿಂದ ಮಾಗಡಿ ಕಡೆಗೆ ಫಿಟ್​ನೆಸ್​ ಷರ್ಟಿಫಿಕೇಟ್​ ಮಾಡಿಸಿಕೊಂಡು ಹೋಗುತ್ತಿದ್ದ ಜನರಿರದ ಖಾಲಿ ಕೆಎಸ್​ಆರ್​ಟಿಸಿ ಬಸ್​ ಮಾಗಡಿ ಕಡೆಯಿಂದ ಬರುತ್ತಿದ್ದ ಸಂಜಯ್​ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಬಸ್​ ಡಿಕ್ಕಿಯಿಂದ ಸಂಜಯ್​ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸ್ಥಳಕ್ಕೆ ರಾಮನಗರ ಗ್ರಾಮಾಂತರ ಸರ್ಕಲ್​ ಇನ್​ಸ್ಪೆಕ್ಟರ್​ ರಮೇಶ್​, ಸಬ್​ಇನ್​ಸ್ಪೆಕ್ಟರ್​ ಜಾರ್ಜ್​ ಪ್ರಕಾಶ್​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.

ಜಿಲ್ಲೆಯ ವೈಧ್ಯಕೀಯ ವರ್ಗ ಸಂಜಯ್ ಅವರ ಅಕಾಲಿಕ ಮರಣಕ್ಕೆ ತೀವ್ರ ಆತಂಕ ವ್ಯಕ್ತಪಡಿಸಿದ್ದು, ಸಂತಾಪ ಸೂಚಿಸಿದೆ.