ಮೃತ ಬೈಕ್ ಸವಾರ ಅಫದ್. 
ಜಿಲ್ಲೆ

ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ, ಬೈಕ್ ಸವಾರ ಸಾವು

ನವೀನ ಬಿ.ಎಂ

ಶಿವಮೊಗ್ಗ: ಎನ್‌ಟಿ ರಸ್ತೆಯ ಟೆಂಪೋ ನಿಲ್ದಾಣದ ಬಳಿ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿ ಸವಾರನಿಗೂ ಗಾಯಗಳಾಗಿವೆ.

ನಗರದ ಖಾಸಗಿ ಕಾಲೇಜಿನ ಪ್ರಾಚಾರ್ಯರ ಪುತ್ರ, ಆರ್‌ಎಂಎಲ್ ನಗರದ ನಿವಾಸಿ ಅಫದ್ (26) ಮೃತಪಟ್ಟ ಬೈಕ್ ಸವಾರ. ಸ್ನೇಹಿತನನ್ನು ಕೆ.ಆರ್.ಪುರ ರಸ್ತೆಯಲ್ಲಿರುವ ಮನೆಗೆ ಬಿಡಲು ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.
ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರ್‌ಎಂಎಲ್‌ನಗರದಿಂದ ಎನ್‌ಟಿ ರಸ್ತೆಯನ್ನು ದಾಟಿ ಕೃಷಿ ಇಲಾಖೆ ರಸ್ತೆಗೆ ಹೋಗುವ ವೇಳೆ ಬಸ್ ಡಿಕ್ಕಿ ಹೊಡೆದಿದೆ. ಪೂರ್ವ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.