ಕೊಳ್ಳೇಗಾಲ ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಮುಖ್ಯ ರಸ್ತೆಯ ಸಿದ್ದಯ್ಯನಪುರ ಬಳಿ ಕೆಎಸ್‌ಆರ್‌ಟಿಸಿ ಬಸ್ ಮುಂಭಾಗದ ಲೈನರ್ ಪೀಸ್ ತುಂಡಾಗಿ ರಸ್ತೆ ಬದಿಗೆ ನುಗ್ಗಿದೆ. 
ಜಿಲ್ಲೆ

ಹಳ್ಳಕ್ಕೆ ನುಗ್ಗಿದ ಸಾರಿಗೆ ಬಸ್

ನಾಗೇಶ ಎಸ್

ಕೊಳ್ಳೇಗಾಲ: ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಮುಖ್ಯ ರಸ್ತೆಯ ಸಿದ್ದಯ್ಯನಪುರ ಬಳಿ ಸೋಮವಾರ ಕೆಎಸ್‌ಆರ್‌ಟಿಸಿ ಬಸ್ ಮುಂಭಾಗದ ಲೈನರ್ ಪೀಸ್ ತುಂಡಾಗಿ ರಸ್ತೆ ಬದಿಗೆ ನುಗ್ಗಿದೆ. ಕೊಳ್ಳೇಗಾಲ-ಜಲ್ಲಿಪಾಳ್ಯ ಮಾರ್ಗದ ಬಸ್ ಇದಾಗಿದ್ದು, ಜಲ್ಲಿಪಾಳ್ಯದಿಂದ ಕೊಳ್ಳೇಗಾಲದ ಕಡೆಗೆ ಬರುವಾಗ ಸಿದ್ದಯ್ಯನಪುರ ಬಳಿ ಬಸ್ ಲೈನರ್ ಪೀಸ್ ತುಂಡಾಗಿ ರಸ್ತೆ ಬದಿಗೆ ನುಗ್ಗಿದೆ. ಅದೃಷ್ಟವಶಾತ್ ಚಾಲಕನ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಬಸ್‌ನಲ್ಲಿ 10ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು.