ಬೆಳಗಾವಿ: ತಾಲೂಕಿನ ಮಚ್ಛೆ ಹೊರವಲಯದ 2ನೇ ಪಡೆ ಕೆಎಸ್‌ಆರ್‌ಪಿ ಬೆಳಗಾವಿ ಘಟಕಕ್ಕೆ ಬುಧವಾರ ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕಕುಮಾರ್ ಭೇಟಿ ನೀಡಿದರು.
ಆವರಣದಲ್ಲಿ ಸಸಿ ನೆಟ್ಟ ಅವರು ಶಟಲ್ ಕೋರ್ಟ್, ಆದಿತ್ಯ ಹಾಲು ಮಾರಾಟ ಮಳಿಗೆ ಉದ್ಘಾಟಿಸಿದರು. ಅಲ್ಲಿನ ವಸತಿ ಗೃಹಗಳಲ್ಲಿ ವಾಸಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿ ಮತ್ತು ಕುಟುಂಬಸ್ಥರ ಕುಂದು-ಕೊರತೆ ವಿಚಾರಿಸಿದರು. ಕರೊನಾ ಸಂಕಷ್ಟ ಕಾಲದಲ್ಲಿ ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.
ಉತ್ತರ ವಲಯದ ಐಜಿಪಿ ರಾಘವೇಂದ್ರ ಸುಹಾಸ್, ನಗರ ಪೊಲೀಸ್ ಆಯುಕ್ತ ಎನ್.ತ್ಯಾಗರಾಜನ್, ಕೆಎಸ್‌ಆರ್‌ಪಿ 2ನೇ ಪಡೆ ಕಮಾಂಡೆಂಟ್ ಹಂಜಾ ಹುಸೇನ್, ಪೊಲೀಸ್ ತರಬೇತಿ ಶಾಲೆ ಪ್ರಾಚಾರ್ಯ ರಮೇಶ ಬೋರಗಾವಿ, ಸಹಾಯಕ ಕಮಾಂಡೆಂಟ್ ಯು.ಎನ್. ಹೇಮಂತಕುಮಾರ, ವೈ.ನಾಗೇಶ, ಇತರರು ಉಪಸ್ಥಿತರಿದ್ದರು.