ಜಿಲ್ಲೆ

ಸಮುದಾಯ ಅಭಿವೃದ್ಧಿ ಯೋಜನೆಯಡಿ ಪ್ರಸ್ತಾವನೆ ಆಹ್ವಾನ

Kopala - Raveendra V K

ಕೊಪ್ಪಳ: ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಕ್ರಿಶ್ಚಿಯನ್​, ಜೈನ್​, ಸಿಖ್​, ಬೌದ್ಧ ಸಮುದಾಯ ಅಭಿವೃದ್ಧಿ ಯೋಜನೆಯಡಿ ಪ್ರಸ್ತಾವನೆ ಆಹ್ವಾನಿಸಲಾಗಿದೆ.

ಚರ್ಚ್​ ನವೀಕರಣ, ಆವರಣ ಗೋಡೆ, ಸ್ಮಶಾನ ಗೋಡೆ, ಸಮುದಾಯ ಭವನ, ಅನಾಥಾಶ್ರಮ, ವೃದ್ಧಾಶ್ರಮ ನಿರ್ಮಾಣ, ಜೈನ ಬಸೀದಿ ನವೀಕರಣ, ದುರಸ್ಥಿ, ಜೀಣೋರ್ದ್ಧಾರ, ಸಮುದಾಯ ಭವನ ನಿಮಾರ್ಣ. ಸಿಖ್​ ಮತ್ತು ಬೌದ್ಧ ಸಮುದಾಯದ ಅಭಿವೃದ್ಧಿ ಯೋಜನೆಯಡಿ ಬೌದ್ಧ ವಿಹಾರಗಳ ದುರಸ್ಥಿ, ನವೀಕರಣ ಕಾಮಗಾರಿ ಕೈಗೊಳ್ಳಲು ಮತ್ತು ಸಹಾಯನುದಾನ ಪಡೆಯಲು ಇಚ್ಚಿಸುವ ಅರ್ಹ ಸಂಸ್ಥೆಯವರು ಪ್ರಸ್ತಾವನೆ ಸಲ್ಲಿಸಬಹುದು. ಮಾಹಿತಿಗಾಗಿ ದೂ.ಸಂ:08539-&225070ಗೆ ಸಂಪರ್ಕಿಸಬಹುದೆಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.