ರಾಯಚೂರಿನ ಅನುಷಾ ನಗರದಲ್ಲಿ ಪೊಲೀಸರು ಬುಧವಾರ ವಶಪಡಿಸಿಕೊಂಡಿರುವ ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರ್ ಪಾಕೇಟ್‌ಗಳು. 
ಜಿಲ್ಲೆ

ಕ್ಷೀರಭಾಗ್ಯ ಹಾಲಿನ ಪೌಡರ್ ವಶ

ರಾಚಯ್ಯ ಸ್ವಾಮಿ

ರಾಯಚೂರು: ಕ್ಷೀರಭಾಗ್ಯ ಯೋಜನೆಯಡಿ ಸರ್ಕಾರಿ ಶಾಲೆಗಳಿಗೆ ಸರಬರಾಜು ಮಾಡಬೇಕಾದ ಹಾಲಿನ ಪೌಡರ್‌ನ್ನು ಅಕ್ರಮವಾಗಿ ಸಂಗ್ರಹ ಮಾಡಲಾಗಿದೆ ಎನ್ನುವ ದೂರಿನ ಮೇರೆಗೆ ನಗರದ ಅನುಷಾನಗರದಲ್ಲಿ ನೇತಾಜಿನಗರ ಠಾಣೆ ಪೊಲೀಸರು ಬುಧವಾರ ದಾಳಿ ನಡೆಸಿ 300ಕ್ಕೂ ಹೆಚ್ಚು ಹಾಲಿನ ಪೌಡರ್ ಪಾಕೇಟ್ ವಶಕ್ಕೆ ಪಡೆದಿದ್ದಾರೆ.
ಆಂಧ್ರಪ್ರದೇಶದ ನೋಂದಣಿಯಿರುವ ವಾಹನಗಳಲ್ಲಿ ಹಾಲಿ ಪೌಡರ್ ಪಾಕೇಟ್‌ಗಳು ಪತ್ತೆಯಾಗಿದ್ದು, ಶಾಲೆಗಳಿಗೆ ಹಾಲಿನ ಪಾಕೇಟ್ ಸರಬರಾಜು ಮಾಡಿ ಸಂಜೆ ಕೆಂಎಎ್ ಗೋದಾಮಿಗೆ ಹೋಗಬೇಕಾದ ವಾಹನಗಳು ಖಾಸಗಿ ಸ್ಥಳದಲ್ಲಿ ನಿಲುಗಡೆ ಮಾಡಿರುವುದ ಅನುಮಾನಕ್ಕೆ ಕಾರಣವಾಗಿತ್ತು.
ಶಾಲೆಗಳಿಗೆ ಸರಬರಾಜು ಮಾಡಬೇಕಾದ ಹಾಲಿನ ಪೌಡರ್ ಪಾಕೇಟ್‌ಗಳನ್ನು ಅನಕೃತವಾಗಿ ಆಂಧ್ರಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂದು ಹೇಳಲಾಗುತ್ತಿದ್ದು, ಹಾಲಿನ ಪೌಡರ್ ವಶಕ್ಕೆ ಪಡೆದಿರುವ ಪೊಲೀಸರು ಈ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.