ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತ ದುರಂತ ಬೆನ್ನಲ್ಲೇ, ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಅಂದಾಜು 10 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿರುವುದು ಬಹಿರಂಗವಾಗಿದೆ. ಈ ಸಂಬಂಧ ಬಿಬಿಎಂಪಿ ನೋಟಿಸ್ ಜಾರಿ ಮಾಡಿದ್ದರೂ, ಈವರೆಗೂ ಮಾರುತ್ತಿಲ್ಲ ನೀಡಿಲ್ಲ ಅಥವಾ ತೆರಿಗೆ ಪಾವತಿಸಿಲ್ಲ.
ಕೆಎಸ್‌ಸಿಎ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಹಲವು ಜಾಹೀರಾತು ಲಕಗಳಿವೆ. ಇವುಗಳಲ್ಲಿ ಸಂಸ್ಥೆಯು ವಾರ್ಷಿಕ ತೆರಿಗೆಯನ್ನು ನಿಯಮಿತವಾಗಿ ಪಾವತಿಸುತ್ತಿಲ್ಲ. ಹೀಗಾಗಿ ಕಳೆದ ತಿಂಗಳು ಪಾಲಿಕೆ ಅಧಿಕಾರಿಗಳು ಈ ಸಂಸ್ಥೆಗೆ ನೋಟಿಸ್ ನೀಡಿದ್ದರು. ಸ್ಟೇಡಿಯಂ ನಗರದ ಮಧ್ಯ ಭಾಗದಲ್ಲಿದ್ದು, ಇಲ್ಲಿ ಜಾಹೀರಾತು ಪ್ರದರ್ಶಿಸುವುದರಿಂದ ಸಂಸ್ಥೆಗೆ ಉತ್ತಮ ಆದಾಯ ಬರುತ್ತಿದೆ. ಇದಕ್ಕೆ ಶುಲ್ಕ ಪಾವತಿಸುವುದು ಕಡ್ಡಾಯ. ಆದರೆ, ಪಾಲಿಕೆ ಅಧಿಕಾರಿಗಳು ಕೆಎಸ್‌ಸಿಎಯಿಂದ ಬಲವಂತವಾಗಿ ಬಾಕಿ ಶುಲ್ಕ ವಸೂಲು ಮಾಡಲು ಹಿಂದೇಟು ಹಾಕಿತ್ತು. ಇದೀಗ ಕಾಲ್ತುಳಿತ ಪ್ರಕರಣ ಮುನ್ನೆಲೆಗೆ ಬಂದ ನಂತರ ಜಾಹೀರಾತು ಬಾಬ್ತಿನ ಬಾಕಿ ಹಣ ವಸೂಲು ಮಾಡಲು ಪಾಲಿಕೆ ಗಮನ ನೀಡಿದೆ.