ಜಿಲ್ಲೆ

ಬಸ್ ಪ್ರಯಾಣ ದರ ಏರಿಕೆಗೆ ವಿರೋಧ

Davanagere

ಹರಪನಹಳ್ಳಿ: ಕೆಎಸ್ಸಾರ್ಟಿಸಿ ಬಸ್ ಪ್ರಯಾಣ ದರ ಹೆಚ್ಚಳ ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ತಾಲೂಕು ಸಮಿತಿ ಕಾರ್ಯಕರ್ತರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಸಂಘದ ತಾಲೂಕು ಅಧ್ಯಕ್ಷ ಲಕ್ಷ್ಮಣರಾವತ್ ಮಾತನಾಡಿ, ಸರ್ಕಾರದ ಈ ಕ್ರಮದಿಂದ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಹೊರೆಯಾಗಿದೆ. ಕೂಡಲೇ ದರ ಕಡಿಮೆ ಮಾಡಬೇಕು. ಇಲ್ಲವಾದರೆ ಪ್ರತಿಭಟನೆ ತೀವ್ರ ಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ತಾಲೂಕು ಉಪಾಧ್ಯಕ್ಷ ಪ್ರವೀಣ ಚೌಹ್ವಾಣ್, ವಿಕಾಸ ನಂದಿಬೇವೂರು, ಉಪೇಂದ್ರ, ಮಧು, ಶಂಕರನಾಯ್ಕ, ಸುಮಾ, ರಮೇಶ್, ಸೀಮಾ, ಸೌಮ್ಯ, ಚೈತ್ರಾ, ಗೋಪಿನಾಯ್ಕ, ಸಂಗಮ, ಸಂಜಯ, ಜ್ಯೋತಿ, ಪವಿತ್ರ, ಕುಸುಮಾ ಇತರರಿದ್ದರು.