ಜಿಲ್ಲೆ

ಬಾಗಲಕೋಟೆ ಹೆದ್ದಾರಿ ಬಂದ್; ಪ್ರಯಾಣಿಕರ ಪರದಾಟ

ಮಂಜುನಾಥ ಕೋಳಿಗುಡ್ಡ

-ಒಂದೂವರೆ ಗಂಟೆ ರಸ್ತೆಯ ಮೇಲೆ ನಿಂತ ವಾಹನಗಳು

ಬೆಳಗಾವಿ: ನಗರ ಸಾರಿಗೆ ಬಸ್ ಕಂಡಕ್ಟರ್ ಮೇಲೆ ಮರಾಠಿ ಭಾಷಿಕರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಶನಿವಾರ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಬೆಳಗಾವಿ- ಬಾಗಲಕೋಟೆ ಹೆದ್ದಾರಿ ಬಂದ್ ಮಾಡಿ‌ ಪ್ರತಿಭಟನೆ ನಡೆಸಿದರು.

ಬೆಳಗಾವಿ ತಾಲೂಕಿನ ಬಾಳೇಕುಂದ್ರಿ ಗ್ರಾಮದಲ್ಲಿ ಶನಿವಾರ ಕನ್ನಡ ‌ಪರ ಸಂಘಟನೆಗಳ ಕಾರ್ಯಕರ್ತರು ಹೆದ್ದಾರಿ ಬಂದ್ ಮಾಡಿ ಧರಣಿ ನಡೆಸಿ ಹಲ್ಲೆ ನಡೆಸಿದವರ ಬಂಧನಕ್ಕೆ ಒತ್ತಾಯಿಸಿದರು.

ಹೆದ್ದಾರಿಯಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿ ಒಂದೂವರೆ ಗಂಟೆ ಪ್ರಯಾಣಿಕರು ಪರದಾಡಿದರು.