ಅರಕಲಗೂಡಿನಲ್ಲಿ ಕೆಆರ್‌ಎಸ್ ಪಕ್ಷದ ವತಿಯಿಂದ ಏಳು ಕನ್ನಡಿಗ ಎದ್ದೇಳು ಅಭಿಯಾನ ನಡೆಯಿತು. ಉಮೇಶ್, ದೇವರಾಜು, ಗುರುಮೂರ್ತಿ, ಉಮೇಶ್, ದೇವರಾಜ್, ರಮೇಶ್, ರೂಪಾ, ಪ್ರಭು, ಸಣ್ಣಸ್ವಾಮಿ, ಗಣೇಶ್, ಶ್ರೀನಿವಾಸ್ ಇತರರಿದ್ದರು. 
ಜಿಲ್ಲೆ

ಭ್ರಷ್ಟಾಚಾರಮುಕ್ತ ಆಡಳಿತಕ್ಕೆ ಕೆಆರ್‌ಎಸ್ ಪಕ್ಷ ಬೆಂಬಲಿಸಿ

ರವಿಕುಮಾರ್ ಪಿ. ಕೆ

ಅರಕಲಗೂಡು: ಭ್ರಷ್ಟಾಚಾರಮುಕ್ತ ಆಡಳಿತಕ್ಕಾಗಿ ಜನತೆ ಕೆಆರ್‌ಎಸ್ ಪಕ್ಷ ಬೆಂಬಲಿಸಬೇಕು ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ್ ಬೆಳಗುಂಬ ಮನವಿ ಮಾಡಿದರು.

ಪಟ್ಟಣದಲ್ಲಿ ಕೆಆರ್‌ಎಸ್ ಪಕ್ಷದ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಏಳು ಕನ್ನಡಿಗ ಎದ್ದೇಳು ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷ ಅಧಿಕಾರದಲ್ಲಿ ಇರದಿದ್ದರೂ ಕಳೆದ ಹಲವಾರು ವರ್ಷಗಳಿಂದ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿಕೊಂಡು ಬಂದಿದೆ. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದು, ನ್ಯಾಯಯುತ ಪರಿಹಾರಕ್ಕಾಗಿ ಶ್ರಮಿಸುತ್ತಿದೆ ಎಂದರು.

ಭ್ರಷ್ಟಾಚಾರ ಎಂಬುದು ಸಾಮಾನ್ಯ ಪಿಡುಗಿನಂತಾಗಿದ್ದು, ರೈತರು ಪ್ರತಿ ಕೆಲಸಕ್ಕೂ ಲಂಚ ನೀಡುವ ಪರಿಸ್ಥಿತಿ ತಲೆದೋರಿದೆ. ಲಂಚ ಮುಕ್ತ ಆಡಳಿತಕ್ಕಾಗಿ ಜನರು ಪಕ್ಷದ ಅಭಿಯಾನ ಬೆಂಬಲಿಸಬೇಕು. ಕೆಆರ್‌ಎಸ್ ಪಕ್ಷದಿಂದ ಮಾತ್ರ ಸ್ವಚ್ಛ ಆಡಳಿತ ಸಾಧ್ಯ. ಇದಕ್ಕಾಗಿ ನಮ್ಮ ಹೋರಾಟಕ್ಕೆ ಜನರು ಕೈಜೋಡಿಸಿದರೆ ಜಯ ಸಿಗಲಿದೆ ಎಂದು ಮನವಿ ಮಾಡಿದರು.

ಪಕ್ಷದ ತಾಲೂಕು ಘಟಕದ ಅಧ್ಯಕ್ಷ ಎಂ.ದೇವರಾಜು ಮಾತನಾಡಿ, ತಾಲೂಕಿನ ನಡೆಯುತ್ತಿರುವ ದುರಾಡಳಿತಕ್ಕೆ ಕಡಿವಾಣ ಬೀಳಬೇಕಿದೆ ಎಂದರು.

ಮುಖಂಡರಾದ ಹರಳಹಳ್ಳಿ ತಮ್ಮೇಗೌಡ, ಕುಮಾರ್, ಗಿಡ್ಡೇಗೌಡ, ಜಯರಾಮ್, ಸಣ್ಣಸ್ವಾಮಿ, ಲೋಕೇಶ್, ಪ್ರೇಮ್ ಕುಮಾರ್, ಬೆಳ್ಳಾಮೆ ರವಿ, ಲಿಂಗರಾಜು ಇತರರಿದ್ದರು.

ವಿವಿಧೆಡೆ ಅಭಿಯಾನ: ತಾಲೂಕಿನ ಕೊಣನೂರು, ಹಂಡ್ರಂಗಿ, ದೊಡ್ಡಬೆಮ್ಮತ್ತಿ, ಬೈಚನಹಳ್ಳಿ, ಜೋಡಿಗುಬ್ಬಿ, ದೊಡ್ಡಮಗ್ಗೆ, ಕೇರಳಾಪುರ, ರಾಮನಾಥಪುರದಲ್ಲಿ ಪಕ್ಷದ ಅಭಿಯಾನ ನಡೆಯಿತು.