ಜಿಲ್ಲೆ

ಕರ್ನಾಟಕಕ್ಕಾಗಿ ನಾವು, ಜನಜಾಗೃತಿ ಬೈಕ್ ಜಾಥಾ. ಫೆ 28 ಕ್ಕೆ ಗದಗ ನಗರಕ್ಕೆ: ವೀರನಗೌಡ ಮೂಗನೂರ

ಗದಗ: ಫೆ 19 ರಿಂದ ಕೆಆರ್ ಎಸ್ ಪಕ್ಷದಿಂದ ಪ್ರಾರಂಭಿಸಲಾಗಿರುವ ಕರ್ನಾಟಕಕ್ಕಾಗಿ ನಾವು ಎನ್ನುವ ರಾಜ್ಯವ್ಯಾಪಿ ಜನಜಾಗೃತಿ ಬೈಕ್ ರ್ಯಾಲಿ ಮಾರ್ಚ್ 2 ರಂದು ಶನಿವಾರ ನೆಲಮಂಗಲದಲ್ಲಿ ಬೃಹತ್ ಸಮಾರೋಪ ಸಮಾವೇಶ ಜರುಗಲಿದೆ ಎಂದು ಕೆಆರ್ ಎಸ್ ಪಕ್ಷದ ವೀರನಗೌಡ ಮೂಗನೂರ ಹೇಳಿದರು. ಅವರು ಸೋಮವಾರ ಪ್ರತಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಬೈಕ್ ರ್ಯಾಲಿ ಈಗಾಗಲೇ 31 ಜಿಲ್ಲೆಗಳಿಗೆ ಹಾಗೂ 82 ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿ ಜನರಲ್ಲಿ ಮೂರು ಪಕ್ಷಗಳಿಂದ ನಡೆಯುತ್ತಿರುವ ಸ್ವಜನಪಕ್ಷಪಾತ, ಭ್ರಷ್ಟಾಚಾರ ದಿಂದ ಜನರು ರೋಸಿ ಹೋಗಿದ್ದಾರೆ ಇದನ್ನು ಸಾರ್ವಜನಿಕರಿಗೆ ತಿಳಿಸುವ ನಮ್ಮ ಪಕ್ಷ ಕೆಲಸ ಮಾಡುತ್ತಿದೆ.

ಈ ಜಾಗೃತಿ ಜಾಥಾ ಫೆ 28 ರಂದು ಬುಧವಾರ ಗದಗ ನಗರದಲ್ಲಿ ಜಾಥಾ ನಡೆಸಿ ನಂತರ ಲಕ್ಷ್ಮೇಶ್ವರಕ್ಕೆ ತೆರಳಿಲದೆ ಎಂದು ತಿಳಿಸಿ ಬಿಜೆಪಿ, ಕಾಂಗ್ರೆಸ್ ಆಡಳಿತವನ್ನು ಟೀಕಿಸಿದರು.  ಸುದ್ದಿಗೋಷ್ಠಿಯಲ್ಲಿ ಫಕೀರಗೌಡ ತಮ್ಮನಗೌಡ್ರ, ಮೌಲಾಸಾಬ ಪೆಂಡಾರಿ, ರಫೀಕಸಾಬ ಅಣ್ಣಿಗೇರಿ, ಸುಲೇಮಾನ ಬೆಟಗೇರಿ, ಬಸವರಾಜ ಅರಗಂಜಿ, ಖಾದೀರಸಾಬ ತೆಕ್ಕಲಕೋಟಿ, ಕೊಟ್ರೇಶ ಮುಳಗುಂದ, ಕೃಷ್ಣಾ ವಡವಿ ಮುಂತಾದವರು ಹಾಜರಿದ್ದರು