ಕೆ.ಆರ್.ಪೇಟೆ : ತಾಲೂಕಿನ ಸಿಂಧುಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಆರ್. ಹೇಮಂತ ಕುಮಾರ್, ಉಪಾಧ್ಯಕ್ಷರಾಗಿ ಎಸ್.ಎಂ. ರವಿ ಅವರು ಲಾಟರಿ ಮೂಲಕ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್, ಬಿಜೆಪಿ ಬೆಂಬಲಿತ ಹೇಮಂತ ಕುಮಾರ್, ಕಾಂಗ್ರೆಸ್ ಮತ್ತು ರೈತ ಸಂಘ ಬೆಂಬಲಿತ ಮೋಹನ್‌ಕುಮಾರ್, ಉಪಾಧ್ಯಕ್ಷ ಸ್ಥಾನಕ್ಕೆ ಎಸ್ .ಎಂ. ರವಿ, ಅನಸೂಯ ನಾಮಪತ್ರ ಸಲ್ಲಿಸಿದ್ದರು. ಮತದಾನ ಸಂದರ್ಭ ಎಲ್ಲರಿಗೂ ತಲಾ 6ಮತ ದೊರೆತ ಕಾರಣ, ಫಲಿತಾಂಶ ಘೋಷಣೆಗಾಗಿ ಚುನಾವಣಾಧಿಕಾರಿಗಳು ಲಾಟರಿ ಮೊರೆ ಹೋದರು. ಆ ಸಂದರ್ಭ ಎಸ್.ಆರ್. ಹೇಮಂತ ಕುಮಾರ್ ಮತ್ತು ರವಿ ಅವರಿಗೆ ಅದೃಷ್ಟ ಒಲಿಯಿತು. ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ಡಿ.ಆಶಾ, ಸಹ ಚುನಾವಣಾಧಿಕಾರಿಯಾಗಿ ಸಂಘದ ಕಾರ್ಯದರ್ಶಿ ನಿಂಗರಾಜು ಕಾರ್ಯನಿರ್ವಹಿಸಿದರು. ನಿರ್ದೇಶಕರಾದ ಎಸ್. ಮೋಹನ್, ಶೋಭಾ, ಕೃಷ್ಣೇಗೌಡ, ಲೋಕೇಶ, ಗ್ರಾ.ಪಂ.ಮಾಜಿ ಅಧ್ಯಕ್ಷೆ ದಿವ್ಯಾ ಗಿರೀಶ್, ಗ್ರಾ.ಪಂ.ಸದಸ್ಯ ನವೀನ್‌ಕುಮಾರ್, ಮುಖಂಡರಾದ ಬಾಬು, ವೇಣುಗೋಪಾಲ್, ಹರೀಶ, ಸೋಮೇಶ್, ರಂಗಣ್ಣ, ವಿಶ್ವನಾಥ್ ಇದ್ದರು.