ಜಿಲ್ಲೆ

ಭಾವಿ ಪರ್ಯಾಯ ಕೃಷ್ಣಾಪುರ ಮಠದ ಭತ್ತ ಮುಹೂರ್ತ

ಗೋಪಾಲಕೃಷ್ಣ ಪಾದೂರ್


ಉಡುಪಿ: ಭಾವಿ ಪರ್ಯಾಯ ಕೃಷ್ಣಾಪುರ ಮಠದ  ಭತ್ತ  ಮುಹೂರ್ತ ಬುಧವಾರ ಕೃಷ್ಣಮಠದಲ್ಲಿ ಸಂಪನ್ನಗೊಂಡಿತು.

ಕೃಷ್ಣಾಪುರ ಮಠದಲ್ಲಿ ನವಗ್ರಹ ಪೂಜೆ ಬಳಿಕ ತಲೆಮೇಲೆ ಅಕ್ಕಿ ಮೂಡಿ ಹೊತ್ತುಕೊಂಡು ಮೆರವಣಿಗೆ ಮೂಲಕ  ಚಂದ್ರಮೌಳೇಶ್ವರ, ಅನಂತೇಶ್ವರ, ಶ್ರೀ ಕೃಷ್ಣ ಮುಖ್ಯಪ್ರಾಣದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ನಡೆಸಿ ಬಡಗುಮಾಳಿಗೆಯಲ್ಲಿ  ತಂದು ಇಡಲಾಯಿತು.

ಭತ್ತ  ಮುಹೂರ್ತದ ನಂತರ ಗೋಶಾಲೆಯ ಹಿಂಭಾಗದಲ್ಲಿ ನಿರ್ಮಿಸಿದ ಕಟ್ಟಿಗೆ ರಥಕ್ಕೆ ಶಿಖರವನ್ನಿಡಲಾಯಿತು. ಮಠದ ಪುರೋಹಿತ ವೇ.ಮೂ.ಶ್ರೀನಿವಾಸ ಉಪಾಧ್ಯಾಯ ಧಾರ್ಮಿಕ ವಿಧಿ ನೆರವೇರಿಸಿದರು.

ಶಾಸಕ,  ಪರ್ಯಾಯೋತ್ಸವ ಸಮಿತಿಯ ಅಧ್ಯಕ್ಷ ರಘುಪತಿ ಭಟ್, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಾಭಿವೃದ್ಧಿ ಪರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ , ಮಠದ ಶ್ರೀನಿವಾಸ ಭಟ್ ಪಡುಬಿದ್ರೆ , ವರದ ರಾವ್, ಸೀತಾರಾಮ ಭಟ್, ಕೊಟ್ಟಾರಿ ರಾಘವೇಂದ್ರ ರಾವ್, ಕಟೀಲು ದೇವಸ್ಥಾನದ ಅರ್ಚಕ ಲಕ್ಷ್ಮೀನಾರಯಣ ಅಸ್ರಣ್ಣ ಪ್ರಮುಖರಾದ ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ, ಶ್ರೀಪತಿ ಭಟ್  ಮೂಡುಬಿದ್ರೆ, ಬಾಲಾಜಿ ರಾಘವೇಂದ್ರ ಆಚಾರ್ಯ, ವಿದ್ವಾಂಸ ಹರಿದಾಸ ಭಟ್, ಶಿವಪ್ರಸಾದ್ ತಂತ್ರಿ, ಪದ್ಮನಾಭ ಭಟ್ ಕಿದಿಯೂರು  ಸಮಿತಿಯ ಶ್ರೀಶ ಆಚಾರ್ಯ, ರಾಘವೇಂದ್ರ ರಾವ್, ಲಕ್ಷ್ಮೀನಾರಯಣ್, ಜಯಪ್ರಕಾಶ್ ಕೆದ್ಲಾಯ ಪ್ರಧಾನ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರು ಪಾಲ್ಗೊಂಡಿದ್ದರು.