ಜಿಲ್ಲೆ

ಕೃಷ್ಣಪ್ರಸಾದ್ ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ

ಸುನಿಲ್ ಪೊನ್ನೇಟಿ

ಕುಶಾಲನಗರ:

ಕುಶಾಲನಗರ ಪುರಸಭೆಯ ಮುಖ್ಯಾಧಿಕಾರಿಯಾಗಿ ಕೃಷ್ಣಪ್ರಸಾದ್ ಅವರನ್ನು ನೇಮಿಸಿ ಸÀರ್ಕಾರ ಅಧಿಕೃತವಾಗಿ ಘೋಷಣೆ ಮಾಡಿದೆ. ಇದುವರೆಗೆ ಹಿರಿಯ ಆರೋಗ್ಯ ನಿರೀಕ್ಷಕರಾಗಿದ್ದ ಕೃಷ್ಣಪ್ರಸಾದ್ ಹೆಚ್ಚುವರಿಯಾಗಿ ಮುಖ್ಯಾಧಿಕಾರಿ ಹುದ್ದೆ ನಿರ್ವಹಣೆ ಮಾಡುತ್ತಿದ್ದರು.

ಇದೀಗ ಸೋಮವಾರ ಕರ್ನಾಟಕ ಸರ್ಕಾರ ಕೃಷ್ಣಪ್ರಸಾದ್ ಅವರನ್ನು ಕರ್ನಾಟಕ ಪೌರಾಡಳಿತ ಮುಖ್ಯಾಧಿಕಾರಿಯಾಗಿ (ಕರ್ನಾಟಕ ಮುನ್ಸಿಪಲ್ ಅಡ್ಮಿನಿಸ್ಟ್ರೇಟಿವ್ ಸರ್ವೀಸ್) ಅಧಿಕೃತ ಅಧಿಸೂಚನೆ ಹೊರಡಿಸಿದೆ.