ಜಿಲ್ಲೆ

ಬೆಟ್ಟದತುಂಗದಲ್ಲಿ ಮಕ್ಕಳಿಗೆ ವೇಷ ಭೂಷಣ ಸ್ಪರ್ಧೆ

ಎ. ಆರ್. ರಘುರಾಮ


ಬೆಟ್ಟದಪುರ : ರೋಟರಿ ಸಂಸ್ಥೆ ಜಗತ್ತಿನಾದ್ಯಂತ ಮಾನವೀಯ ಸೇವೆಗೆ ಮುಂದಾಗಿದೆ ಎಂದು ಪಿರಿಯಾಪಟ್ಟಣ ಐಕಾನ್ಸ್ ಘಟಕ ಅಧ್ಯಕ್ಷ ಜೆ.ಎಸ್. ನಾಗರಾಜ್ ತಿಳಿಸಿದರು. ಸಮೀಪದ ಬೆಟ್ಟದತುಂಗ ಗ್ರಾಮ ಪಂಚಾಯಿತಿ ಆವರಣದಲ್ಲಿ ಶುಕ್ರವಾರಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಗನವಾಡಿ ಕೇಂದ್ರಗಳಿಗೆ ಪರಿಕರ ವಿತರಣೆ, ರಾಧಾ-ಕೃಷ್ಣ ವೇಷಭೂಷಣ ಸ್ಪರ್ಧೆ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದರು. ರೋಟರಿ ಸಂಸ್ಥೆ ನಿರಂತರ ಪ್ರಯತ್ನದಿಂದ ವಿಶ್ವದ 164 ದೇಶಗಳಲ್ಲಿ ಪೋಲಿಯೋ ನಿಯಂತ್ರಣವಾಗಿದೆ. ಭಾರತದಲ್ಲಿ ಪೋಲಿಯೋ ಸಂಪೂರ್ಣ ನಿರ್ಮೂಲನೆಯಲ್ಲಿ ರೋಟರಿ ಸೇವೆ ಅನನ್ಯ ಎಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೀತಿ ಲಕ್ಷ್ಮೀ ಮಾತನಾಡಿ, ಪುಟ್ಟ ಮಕ್ಕಳ ಪ್ರತಿಭೆಯನ್ನು ಗುರುತಿಸುವ ಉದ್ದೇಶದಿಂದ ರೋಟರಿ ಸಂಸ್ಥೆಗೆ ಅಂಗನವಾಡಿ ಸಹಯೋಗ ನೀಡಿ ಕೃಷ್ಣ ಜನ್ಮಾಷ್ಟಮಿ ಸಂದರ್ಭ ಚಿಣ್ಣರ ಲೋಕ ಸೃಷ್ಟಿಸಿರುವುದು ಅಭಿನಂದನೀಯ ಎಂದರು. ವಿವಿಧ ವೇಷಭೂಷಣ ಸ್ಪರ್ಧೆಯಲ್ಲಿ ಮಕ್ಕಳನ್ನು ಕಾಣುವುದೇ ಚಂದ. ಇದಕ್ಕೆ ಸಹಕಾರ ನೀಡಿದ ಎಲ್ಲರೂ ಅಭಿನಂದನೆಗೆ ಅರ್ಹರು ಎಂದರು.
ಗಮನ ಸೆಳೆದ ಕೃಷ್ಣರಾಧೆ ವೇಷಧಾರಿಗಳು,
ವಿವಿಧ ಅಂಗನವಾಡಿ ಕೇಂದ್ರದ 40ಕ್ಕೂ ಹೆಚ್ಚು ಮಕ್ಕಳು ಕೃಷ್ಣ, ರಾಧೆಯರ ವೇಷ ಭೂಷಣ ಧರಿಸಿ ಗಮನ ಸೆಳೆದರು.