ಜಿಲ್ಲೆ

ಮಕ್ಕಳ ಬೆಳವಣಿಗೆಗೆ ಪ್ರಾಥಮಿಕ ಶಿಕ್ಷಣ ನಿರ್ಣಾಯಕ : ಶಿಕ್ಷಣ ತಜ್ಞ ಕೃಷ್ಣ ಅಭಿಮತ

Mangaluru - Hariprasad Rai


ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್(ಇಂಟಾಕ್)ನ ಮಂಗಳೂರು ಘಟಕ ಮತ್ತು ಕೆನರಾ ಟ್ರಸ್ಟ್ ವತಿಯಿಂದ ಅಂತಾರಾಷ್ಟ್ರೀಯ ಶಿಕ್ಷಣ ದಿನ ಆಚರಣೆ ಅಂಗವಾಗಿ ಪ್ರಾಯೋಗಿಕ ಶಿಕ್ಷಣ ತಜ್ಞ , ಸಿಟ್ಟಿಲಿಂಗಿಯ ತುಲೀರ್ ಶಾಲೆಯ ಸಹ ಸಂಸ್ಥಾಪಕ ಕೃಷ್ಣ ಅವರೊಂದಿಗೆ ಸಂವಾದ ಕಾರ್ಯಕ್ರಮ ನಗರದ ಬಲ್ಲಾಳ್‌ಬಾಗ್‌ನ ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ನಡೆಯಿತು.
ಕೃಷ್ಣ ಅವರು ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಸಿಟ್ಟಿಲಿಂಗಿ ಎಂಬ ಹಳ್ಳಿಯಲ್ಲಿ ತುಲೀರ್ ಶಾಲೆಯನ್ನು ಆರಂಭಿಸಿದ
ಅನುಭವಗಳನ್ನು ಹಂಚಿಕೊಂಡರು. ಮಕ್ಕಳ ಬೆಳವಣಿಗೆಗೆ ಪ್ರಾಥಮಿಕ ಶಿಕ್ಷಣವು ನಿರ್ಣಾಯಕವಾಗಿದೆ. ಆದರೆ ಭಾರತದಲ್ಲಿ ಬೋಧನೆಯು ಕಡಿಮೆ ವೇತನ ಪಡೆಯುವ ವೃತ್ತಿಯಾಗಿದ್ದು, ಅತ್ಯುತ್ತಮ ಪ್ರತಿಭೆಗಳನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ ಎಂದು ಅವರು ಹೇಳಿದರು.
ಸಿಟ್ಟಿಲಿಂಗಿ ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಪತ್ನಿ ಅನುರಾಧರೊಂದಿಗೆ ಒಂದು ಎಕರೆ ಜಮೀನಿನಲ್ಲಿ ಎರಡು ಹುಲ್ಲಿನ ಗುಡಿಸಲುಗಳೊಂದಿಗೆ ತುಲೀರ್ ಶಾಲೆ ಸ್ಥಾಪಿಸಿದೆ. ಈ ಕೇಂದ್ರವು ಹಳ್ಳಿಯ ಮಕ್ಕಳಿಗೆ ಶಾಲಾ ಸಮಯದ ನಂತರ ಆಸಕ್ತಿಯ
ವಿಷಯಗಳನ್ನು ಮುಕ್ತ ವಾತಾವರಣದಲ್ಲಿ ಅನ್ವೇಷಿಸಲು ಅವಕಾಶವನ್ನು ಒದಗಿಸಿತು ಎಂದು ಅವರು ತಿಳಿಸಿದರು.
ಇಂಟಾಕ್ ಮಂಗಳೂರು ಘಟಕದ ಸಂಚಾಲಕ ಸುಭಾಸ್ ಚಂದ್ರ ಬಸು ಸ್ವಾಗತಿದರು.