ದೇವದುರ್ಗ ತಾಲೂಕು ಹೂವಿನಹೆಡಗಿಯ ಕೃಷ್ಣಾನದಿಯಲ್ಲಿ ನೀರು ಕಡಿಮೆಯಾಗಿ ಮರಳು ಕಾಣುತ್ತಿರುವುದು. 
ಜಿಲ್ಲೆ

ಕೃಷ್ಣಾ ನದಿಯಲ್ಲಿ ನೀರು ಸಂಪೂರ್ಣ ಇಳಿಕೆ

ರುದ್ರಪ್ಪ ವಾಲಿ

ದೇವದುರ್ಗ: ಒಂದೂವರೆ ತಿಂಗಳಿನಿಂದ ಕೃಷ್ಣಾ ನದಿಯಲ್ಲಿ ಏರಿಕೆ ಕಂಡಿದ್ದ ನೀರಿನ ಪ್ರಮಾಣ ಸಂಪೂರ್ಣ ಇಳಿಕೆಯಾಗಿದೆ. ನಾರಾಯಣಪುರ ಡ್ಯಾಂನಲ್ಲಿ ಒಳಹರಿವು ಇಳಿಕೆಯಾಗಿದ್ದರಿಂದ ನದಿಗೆ ಹರಿಸುವ ನೀರಿನ ಪ್ರಮಾಣ ಕೂಡ ಕಡಿಮೆಯಾಗಿದೆ.

ಜಲಾಶಯದಲ್ಲಿ ಭಾನುವಾರ ಒಳಹರಿವು ಪ್ರಮಾಣ 15ಸಾವಿರ ಕ್ಯೂಸೆಕ್‌ಗೆ ಇಳಿಕೆಯಾಗಿದೆ. ಹೀಗಾಗಿ ಡ್ಯಾಂನಿಂದ ಕೃಷ್ಣಾ ನದಿಗೆ ಹರಿಸುವ ನೀರಿನ ಪ್ರಮಾಣ ಕಡಿಮೆ ಮಾಡಿದ್ದು, 2,500ಕ್ಯೂಸೆಕ್ ನೀರು ನದಿಗೆ ಹರಿಸಲಾಗುತ್ತಿದೆ. 33.31ಟಿಎಂಸಿ ಅಡಿ ಸಾಮರ್ಥ್ಯದ ಡ್ಯಾಂನಲ್ಲಿ ಸದ್ಯ 32.84 (ಶೇ.98.59) ಅಡಿ ನೀರಿನ ಸಂಗ್ರಹವಿದೆ. ಕಳೆದ ಎರಡ್ಮೂರು ದಿನಗಳಿಂದ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು ಸದ್ಯ ಸಂಪೂರ್ಣ ಸ್ಥಗಿತವಾಗಿ ಮರಳು ತೇಲಿದೆ.\

ಜಲಾಶಯದಿಂದ ನದಿಗೆ ಹರಿಸುವ ನೀರಿನ ಪ್ರಮಾಣ ಕಡಿಮೆ ಮಾಡಿದ್ದರಿಂದ ಹಲವು ದಿನಗಳಿಂದ ಜಲದಿಗ್ಬಂಧನಕ್ಕೆ ಒಳಗಾಗಿದ್ದ ಹೂವಿನಹೆಡಗಿ ಶ್ರೀ ಗಡ್ಡೆಗೂಳಿ ದೇವಸ್ಥಾನ ಸಂಪೂರ್ಣ ಮುಕ್ತವಾಗಿದೆ. ಇದರಿಂದ ಶ್ರಾವಣದಲ್ಲಿ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಕೊಪ್ಪರದ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ ಸಮೀಪ ಬಂದಿದ್ದ ನೀರು ಇಳಿಕೆಯಾಗಿದೆ. ಅಲ್ಲದೆ ನದಿದಂಡೆ ವ್ಯಾಪ್ತಿಯಲ್ಲಿ ಮನೆಮಾಡಿದ್ದ ನೆರೆ ಆತಂಕ ಕಡಿಮೆಯಾಗಿದೆ.