ಜಿಲ್ಲೆ

ಕೃಷ್ಣಾ ನದಿಗೆ 1.43 ಲಕ್ಷ ಕ್ಯೂಸೆಕ್ ನೀರು

ಲಿಂಗಸುಗೂರು: ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 25 ಕ್ರಸ್ಟ್ ಗೇಟ್‌ಗಳ ಮೂಲಕ 1,44,250 ಕ್ಯೂಸೆಕ್ ನೀರನ್ನು ಮಂಗಳವಾರ ಬಿಡಲಾಗಿದೆ.

ಆಲಮಟ್ಟಿ ಅಣೆಕಟ್ಟೆಯಿಂದ ಬಸವಸಾಗರ ಜಲಾಶಯಕ್ಕೆ 1.50 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದ ಗರಿಷ್ಠ ನೀರಿನ ಸಾಮರ್ಥ್ಯ 492.252 ಮೀ. (33.313 ಟಿಎಂಸಿ) ಇದ್ದು, ಮಂಗಳವಾರ ನೀರಿನ ಮಟ್ಟ 491.02 ಮೀ. (27.927 ಟಿಎಂಸಿ) ಇತ್ತು. ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಲು ಕೆಲ ಅಡಿ ಬಾಕಿ ಇದೆ. ಜಲಾಶಯದಿಂದ 1.60 ಲಕ್ಷ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಬಿಟ್ಟರೆ ಶೀಲಹಳ್ಳಿ ಸೇತುವೆ ಮುಳುಗಡೆಯಾಗಲಿದೆ.