ಸೊರಬ: ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಹಳೇ ಸೊರಬದ ಆಶಾಕಿರಣ್ ಪಬ್ಲಿಕ್ ಸ್ಕೂಲ್‌ನಲ್ಲಿ ಶನಿವಾರ ಕೃಷ್ಣ-ರಾಧೆ ಛದ್ಮವೇಷ ಸ್ಪರ್ಧೆ ಏರ್ಪಡಿಸಲಾಗಿತ್ತು. ದಿನ ನಿತ್ಯ ಸಮವಸ್ತ್ರ ಧರಿಸಿ ಬರುತ್ತಿದ್ದ ಪುಟಾಣಿ ಮಕ್ಕಳು ಕೃಷ್ಣ-ರಾಧೆ ವೇಷದಲ್ಲಿ ಕಂಗೊಳಿಸಿದರು.
ಇಡೀ ಶಾಲಾ ಆವರಣ ಮಕ್ಕಳ ಸಂಭ್ರಮದಿಂದ ಮುಳುಗಿತ್ತು. ಪುಟಾಣಿಗಳಿಗೆ ಆಕರ್ಷಕ ಬಹುಮಾನ ಸಹ ಲಭಿಸಿತು. ಇದರಿಂದ ಮಕ್ಕಳ ಸಂತಸ ಮತ್ತಷ್ಟು ಇಮ್ಮಡಿಗೊಂಡಿತು.