ಮೈದುಂಬಿ ಹರಿಯುತ್ತಿರುವ ಕೃಷ್ಣೆಯ ಒಡಲಲ್ಲಿ ಬೋಟ್ ಸೇವೆ ಆರಂಭಿಸಿರುವುದು. 
ಜಿಲ್ಲೆ

ಮೈದುಂಬಿ ಹರಿಯುತ್ತಿರುವ ಕೃಷ್ಣೆ

Vijayapura - Desk - Gurappa Lokuri

ರಬಕವಿ/ಬನಹಟ್ಟಿ: ಸಹ್ಯಾದ್ರಿ ಬೆಟ್ಟ ಪ್ರದೇಶದ ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಕೃಷ್ಣಾ ನದಿ ತುಂಬಿ ಹರಿಯುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಕೃಷ್ಣೆ ಈಗ ಮೈದುಂಬಿ ಹರಿಯುತ್ತಿದ್ದಾಳೆ. ಹೀಗಾಗಿ ಹಲವಾರು ನೀರಾವರಿ ಯೋಜನೆಗಳ ಕಾಲುವೆಗಳು ತುಂಬಿ ಹರಿಯಲರಂಭಿಸಿವೆ. ರಬಕವಿ ಮಹೇಷವಾಡಗಿ ಸೇತುವೆ ಸಂಪೂರ್ಣ ಮುಳುಗಿದ್ದು, ಅಲೆಗಳ ರಭಸ ಹೆಚ್ಚಾಗಿದ್ದರಿಂದಾಗಿ ಇಲ್ಲಿನ ಬೋಟ್ ಸೇವೆ ರದ್ದುಗೊಳಿಸಿ, ಕೆಳಗಡೆ ಭಾಗದ ಅಸ್ಕಿ, ಮಹೇಷವಾಡಗಿ ಬಳಿಯ ನದಿಯಲ್ಲಿ ಬೋಟ್ ಸೇವೆ ಆರಂಭಿಸಲಾಗಿದೆ ಎಂದು ತಾಲೂಕು ಆಡಳಿತ ತಿಳಿಸಿದೆ.

ಮುಂದಿನ ದಿನಗಳಲ್ಲಿ ನದಿ ಅಪಾಯ ಮಟ್ಟ ಮೀರಿ ಹರಿಯುವ ಸಾಧ್ಯತೆ ಇದ್ದರೂ ಪ್ರವಾಹದ ಭೀತಿ ಇಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷತೆ ದೃಷ್ಠಿಯಿಂದ ನದಿ ಪಾತ್ರದಲ್ಲಿ ವಾಸಿಸುವ ಜನರು ಜಾನುವಾರುಗಳ ಸಮೇತ ಸುರಕ್ಷಿತ ಸ್ಥಳಗಳಿಗೆ ತೆರಳುವುದು ಸೂಕ್ತ ಎಂದು ತಾಲೂಕು ಆಡಳಿತ ತಿಳಿಸಿದೆ.

ಹಿಪ್ಪರಗಿ ಜಲಾಶಯದಿಂದ ಬಂದಷ್ಟೇ ಪ್ರಮಾಣದ ನೀರನ್ನು ಎಲ್ಲ 12 ಗೇಟ್‌ಗಳಿಂದ ಹರಿಬಿಡಲಾಗುತ್ತಿದೆ.