ಉಡುಪಿ; ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ತಮ್ಮ ಚತುರ್ಥ ಶ್ರೀ ಕೃಷ್ಣ ಪೂಜಾ ಪರ್ಯಾಯ ಅವಧಿಯಲ್ಲಿ ಕೆನರಾ ಬ್ಯಾಂಕ್ ಮತ್ತು ಭಕ್ತರ ನೆರವಿನೊಂದಿಗೆ ನಿರ್ಮಿಸಿದ ಶ್ರೀ ಕೃಷ್ಣಮಠದ ರಾಜಾಂಗಣಕ್ಕೆ ಹೊಂದಿಕೊಂಡಿರುವ ನವೀಕೃತ ಶ್ರೀ ಕೃಷ್ಣ ಛತ್ರವನ್ನು ಬುಧವಾರ ಶ್ರೀ ಕೃಷ್ಣನಿಗೆ ಸಮರ್ಪಿಸಲಾಯಿತು.
ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥರು, ಅದಮಾರು ಕಿರಿಯ ಶ್ರೀ ಈಶಪ್ರಿಯ ತೀರ್ಥರು, ಶೀರೂರು ಶ್ರೀ ವೇದವರ್ಧನ ತೀರ್ಥರು ಉಪಸ್ಥಿತರಿದ್ದು, ಅನುಗ್ರಹ ಸಂದೇಶ ನೀಡಿದರು. ನಿರ್ಮಾಣಕಾರ್ಯದಲ್ಲಿ ಮಾರ್ಗದರ್ಶನ ನೀಡಿದ ಇಂಜಿನಿಯರ್ ಯುಕೆ ರಾಘವೇಂದ್ರ ರಾವ್ , ಆರ್ಕಿಟೆಕ್ಟ್ ರಾಜೇಂದ್ರಮಯ್ಯ , ಗುತ್ತಿಗೆದಾರ ಗಂಗಾಧರ ರಾವ್ , ಇಲೆಕ್ಟ್ರಿಕಲ್ ಗುತ್ತಿಗೆದಾರರ ವೆಂಕಟಕೃಷ್ಣ ಐತಾಳ್ ದಾನಿ ಎಂ ಎಂ ಭಟ್ , ವಾದಿರಾಜ ಆಚಾರ್ಯ ಮೊದಲಾದವರನ್ನು ಶ್ರೀಪಾದರು ಸಂಮಾನಿಸಿದರು . ಬಿ ಗೋಪಾಲಕೃಷ್ಣ ಉಪಾಧ್ಯಾಯ ಕಾರ್ಯಕ್ರಮ ನಿರ್ವಹಿಸಿದರು .ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್ ಸ್ವಾಗತಿಸಿದರು . ರಾಘವೇಂದ್ರ ರಾವ್ ಪ್ರಸ್ತಾವಿಸಿದರು . ರಾಘವೇಂದ್ರ ಉಪಾಧ್ಯಾಯ ಪ್ರಾರ್ಥನೆಗೈದರು . ದಿವಾನರಾದ ವರದರಾಜ ಭಟ್ , ಕುಂಭಾಸಿ ಸೂರ್ಯನಾರಾಯಣ ಉಪಾಧ್ಯಾಯ , ರವಿಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು . ಮಠದ ಪುರೋಹಿತರು ಶ್ರೀನಿವಾಸ ಉಪಾಧ್ಯಾಯರ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳು ನೆರವೇರಿದವು .