ಜಿಲ್ಲೆ

ಉಡುಪಿ ಕೃಷ್ಣನಿಗೆ ಸುವರ್ಣ ಛತ್ರ

Udupi

ಉಡುಪಿ: ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹಾಗೂ ಪರ್ಯಾಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಶ್ರೀಕೃಷ್ಣನಿಗೆ ನೂತನ ಸುವರ್ಣ ಛತ್ರ ನಿರ್ಮಿಸಲು ಯೋಜನೆ ರೂಪಿಸಿದ್ದಾರೆ.

ಪ್ರಸ್ತುತ ಮಠದಲ್ಲಿರುವ ಬಂಗಾರದ ಛತ್ರ ಶಿಥಿಲವಾಗಿದ್ದು, 1.5 ಕೆ.ಜಿ. ಬಂಗಾರ ಮತ್ತು 1.5 ಕೆ.ಜಿ. ಬೆಳ್ಳಿಯಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ನೂತನ ಛತ್ರವನ್ನು ದೇವರಿಗೆ ಪ್ರತಿದಿನದ ಅಲಂಕಾರಕ್ಕಾಗಿ ಸಮರ್ಪಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮಠದ ಸಂಪರ್ಕಾಧಿಕಾರಿ ಶ್ರೀಶ ಭಟ್ (9900025432) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.