ಜಿಲ್ಲೆ

ಕೃಷ್ಣ ಮಂತ್ರ ಜಪ ನಿರತರಿಗೆ ಪ್ರಸಾದ

Udupi

ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಶ್ರೀಕೃಷ್ಣಾಷ್ಟಮಿ ಅಂಗವಾಗಿ ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಆಶಯದಂತೆ ಆನ್‌ಲೈನ್ ಕೃಷ್ಣ ಮಂತ್ರ ಜಪದಲ್ಲಿ ಭಾಗವಹಿಸಿದ ಭಕ್ತರಿಗೆ ಪ್ರಸಾದ ಕಳುಹಿಸಿಕೊಡಲಾಯಿತು. ಆನ್‌ಲೈನ್‌ನಲ್ಲಿ 1700 ಮಂದಿ ನೋಂದಣಿ ಮಾಡಿದ್ದು, ಹೊರ ಜಿಲ್ಲೆಯ 1500ಕ್ಕೂ ಅಧಿಕ ಭಕ್ತರಿಗೆ ಕೃಷ್ಣ ಪ್ರಸಾದ ವಿತರಿಸಲಾಗಿದೆ.

ಲೋಕಕಲ್ಯಾಣಕ್ಕಾಗಿ 3 ಕೋಟಿ 46 ಲಕ್ಷ ಸರ್ವಾಭೀಷ್ಟಪ್ರದ ಶ್ರೀಕೃಷ್ಣಮಂತ್ರ ಜಪ ನಡೆದಿದೆ. ಆಡಳಿತ ಆರ್ಥಿಕ ಸುಸ್ಥಿತಿಗಾಗಿ ಪ್ರಾರ್ಥಿಸಿ 26 ಲಕ್ಷ, ಸರ್ವರೋಗ ವಿಮೋಚನಕ್ಕಾಗಿ 26 ಲಕ್ಷ ಮಂತ್ರಗಳನ್ನು ಜಪಿಸಲಾಗಿದೆ.