ಗುಡಿಬಂಡೆ: ಜಿಕೆವಿಕೆ ಕೃಷಿ ವಿವಿಯ ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳು ತಾಲೂಕಿನ ದಪ್ಪರ್ತಿಯಲ್ಲಿ ಹಮ್ಮಿಕೊಂಡಿರುವ ೇತ್ರ ಕಾರ್ಯಾನುಭವದ ಪ್ರಯುಕ್ತ ರೈತರಿಗೆ ಕೃಷಿ ೇತ್ರದ ಬೆಳವಣಿಗೆಗೆ ಬೇಕಾದ ವಿಚಾರಗಳ ಪರಿಚಯಿಸಲು ಕೃಷಿ ಕ್ರಾಂತಿ ಮಿನಿ ಕೃಷಿ ಮೇಳ ಅ.4 ರಂದು ದಪ್ಪರ್ತಿದಲ್ಲಿ ಆಯೋಜಿಸಲಾಗಿದೆಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ರೈತ ಕೃಷ್ಣಾರೆಡ್ಡಿ ತೋಟದಲ್ಲಿ ಹಮ್ಮಿಕೊಂಡಿರುವ ಕೃಷಿ ಕ್ರಾಂತಿ ಮಿನಿ ಕೃಷಿ ಈ ಮೇಳದಲ್ಲಿ ಒಟ್ಟು 78 ವಿವಿಧ ಬೆಳೆಗಳ ತಳಿ ಪರಿಚಯಿಸಲಾಗುತ್ತಿದ್ದು, ಇವುಗಳಲ್ಲಿ ಹಲವಾರು ಹೊಸ ಬೆಳೆ ತಳಿಗಳ ಪರಿಚಯ ಮತ್ತು ಕೃಷಿ ತಾಂತ್ರಿಕ ಮಧ್ಯಸ್ಥಿಕೆ ಪ್ರದರ್ಶಿಸಲಾಗುತ್ತಿದ್ದು, ಕೃಷಿಯಲ್ಲಿ ಉತ್ತಮ ಇಳುವರಿ, ಉತ್ಪಾದಕತೆ ಮತ್ತು ಲಾಭದಾಯಕತೆ ಹೆಚ್ಚಿಸುವ ವಿಧಾನ ಈ ಕಾರ್ಯಕ್ರಮದ ಮೂಲಕ ರೈತರಿಗೆ ಮಾಹಿತಿ ನೀಡಲಿದ್ದಾರೆ.
ರೈತರು ಬೆಳೆಗಳನ್ನು ಸೂಕ್ಷ$್ಮವಾಗಿ ನಿರ್ವಹಿಸುವ ವಿಧಾನ, ಬೆಳೆಗಳಿಗೆ ಬೇಕಾಗುವ ಗೊಬ್ಬರ, ನೀರು ಮತ್ತು ಪೋಷಕಾಂಶಗಳ ನಿಖರ ಪ್ರಮಾಣ ತಿಳಿಯಲು ಈ ಕಾರ್ಯಕ್ರಮ ಸಹಕಾರಿಯಾಗಲಿದೆ. ಈ ಕಾರ್ಯಕ್ರಮಕ್ಕೆ ಮುಖ್ಯಅತಿಥಿಗಳಾಗಿ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಹಾಗೂ ಜಿಕೆವಿಕೆ ಕೃಷಿ ಕಾಲೇಜಿನ ಡೀನ್
ಪ್ರೊ.ಎನ್.ಬಿ.ಪ್ರಕಾಶ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೇಶವರೆಡ್ಡಿ ಅನೇಕ ಇಲಾಖೆಗಳ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.