filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.69944483, 0.43654174);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 45; 
ಜಿಲ್ಲೆ

ಬೆಲೆ ಕುಸಿತ, ಕಡಿಮೆ ಇಳುವರಿ ಚಿಂತೆ ಸಲ್ಲ - ಪ.ಪಂ. ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಕಿವಿಮಾತು

Mangaluru - Nishantha Narayana

ವಿಟ್ಲ: ರೈತರು ಬೆಲೆ ಕುಸಿತ, ಇಳುವರಿ ಕಡಿಮೆ ಬಗ್ಗೆ ಹೆಚ್ಚು ಚಿಂತಿಸಬಾರದು. ಸರ್ಕಾರದ ಸೌಲಭ್ಯಗಳನ್ನು ಪಡೆದು ಕೃಷಿ ಚಟುವಟಿಕೆ ಹೆಚ್ಚಿಸಿ ಅಭಿವೃದ್ಧಿ ಪಥದತ್ತ ಹೆಜ್ಜೆ ಹಾಕಬೇಕು ಎಂದು ಪ.ಪಂ. ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಹೇಳಿದರು.

ವಿಟ್ಲದಲ್ಲಿ ಬಂಟ್ವಾಳ ತಾಲೂಕು ಕೃಷಿ ಇಲಾಖೆ ವತಿಯಿಂದ ಆತ್ಮಯೋಜನೆ ತಾಂತ್ರಿಕ ಕಾರ್ಯಾಗಾರ, ಕಿಸಾನ್ ಗೋಷ್ಠಿ ಹಾಗೂ ಸೌಲಭ್ಯ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕಾರ್ಯಕ್ರಮ ಉದ್ಘಾಟಿಸಿದರು. ವಿಟ್ಲ ಶೋಕಮಾತಾ ಇಗರ್ಜಿ ಧರ್ಮಗುರು ಐವನ್ ಮೈಕೆಲ್ ರಾಡಿಗ್ರಸ್, ಅಳಿಕೆ ಗ್ರಾ.ಪಂ. ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಪದ್ಮರಾಜ ಬಲ್ಲಾಳ ಮಾವಂತೂರು, ಪ್ರಧಾನ ಕಾರ್ಯದರ್ಶಿ ರಮಾನಾಥ ವಿಟ್ಲ, ರಾಜ್ಯಪ್ರತಿನಿಧಿ ಪದ್ಮನಾಭ ರೈ ಗೋಳ್ತಮಜಲು, ಪ.ಪಂ. ಮುಖ್ಯಾಧಿಕಾರಿ ಕರುಣಾಕರ ವಿ. ಮತ್ತಿತರರಿದ್ದರು.

ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ವೀಣಾ ಕೆ.ಆರ್. ಸ್ವಾಗತಿಸಿದರು. ಜಿಲ್ಲಾ ಕೃಷಿ ಇಲಾಖೆಯ ಉಪ ನಿರ್ದೇಶಕಿ ಕುಮುದಾ ಪ್ರಸ್ತಾವನೆಗೈದರು. ಕೃಷಿ ಇಲಾಖೆ ಅಧಿಕಾರಿ ತಾಂತ್ರಿಕ ನಂದನ್ ಶೆಣೈ ನಿರೂಪಿಸಿದರು. ಇಲಾಖೆಯ ವಿರೂಪಾಕ್ಷಿ, ಹನುಮಂತ ಸಹಕರಿಸಿದರು. ತಾಲೂಕು ತಾಂತ್ರಿಕ ವ್ಯವಸ್ಥಾಪಕಿ ದೀಕ್ಷಾ ವಂದಿಸಿದರು.

ಸಾಧಕರಿಗೆ ಸನ್ಮಾನ

೨೦೨೩-೨೦೨೪ನೇ ಸಾಲಿನ ತಾಲೂಕುಮಟ್ಟದ ಭತ್ತದ ಬೆಳೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಎನ್.ಕೆ.ಸುರೇಶ ಭಟ್ ಕೊಣಲೆ ಅವರನ್ನು ಸನ್ಮಾನಿಸಲಾಯಿತು. ಕೃಷಿ ಸಖಿಯರಿಗೆ ಗುರುತು ಪತ್ರ ನೀಡಲಾಯಿತು. ಇಲಾಖಾ ಸೌಲಭ್ಯಗಳ ಮಾಹಿತಿ ಕರಪತ್ರ ಬಿಡುಗಡೆ ಮಾಡಲಾಯಿತು. ೩೦ ಮಂದಿ ಫಲಾನುಭವಿಗಳಿಗೆ ಒಟ್ಟು ೪.೫ ಲಕ್ಷ ರೂ. ಅಧಿಕ ಕೃಷಿ ಚಟುವಟಿಕೆಗೆ ಸಹಕಾರಿಯಾಗುವ ಯಂತ್ರಗಳನ್ನು ವಿತರಿಸಲಾಯಿತು.