ಹುಬ್ಬಳ್ಳಿ: ನಗರದ ನಿವಾಸಿ ಶ್ವೇತಾ-ವಿಕಾಸ ತಿಮ್ಮಪ್ಪ ಅವರ ಪುತ್ರಿ ಎಸ್. ಕ್ರಿಶಾ ವಿಕಾಸ ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸೇರ್ಪಡೆಯಾಗಿದೆ. ಒಂದು ವರ್ಷ ಏಳು ತಿಂಗಳ ಬಾಲಕಿ ಆಗಿರುವ ಕ್ರಿಶಾ, ಈಗಾಗಲೇ 41 ಬಗೆ ಚಿತ್ರಗಳು, 40 ಬಗೆಯ ಪ್ರಾಣಿಗಳು, ದೇಹದ 22 ಭಾಗಗಳನ್ನು ಗುರುತಿಸುತ್ತಾಳೆ. ಅಲ್ಲದೆ 17 ಬಗೆಯ ಆಹಾರ, 13 ಬಗೆಯ ಹಣ್ಣು, 11 ವಾಹನಗಳು, 11 ಬಣ್ಣಗಳು, 9 ತರಕಾರಿ, 6 ಆಕಾರಗಳು, 5 ಪೀಠೋಪಕರಣ, 5 ಬಗೆಯ ಹಕ್ಕಿ, 4 ದೇಶದ ಧ್ವಜ, ಇಂಗ್ಲಿಷ್‌ನ 26 ಅಕ್ಷರಮಾಲೆ ಗುರುತಿಸುವ ಮೂಲಕ ಗಮನ ಸೆಳೆದಿದ್ದಾಳೆ. ಕ್ರಿಶಾ 10 ಬಗೆಯ ಪ್ರಾಣಿಯ ಧ್ವನಿಯನ್ನೂ ಅನುಕರಿಸುವ ಕಲೆ ಕರಗತ ಮಾಡಿಕೊಂಡಿದ್ದಾಳೆ. ಬಾಲಕಿಗೆ ಅಜ್ಜಿ ಲಲಿತಾ ಜಾಧವ ಮಾರ್ಗದರ್ಶನ ನೀಡಿದ್ದಾರೆ.