ಜಿಲ್ಲೆ

ಚಂದಾಪುರಕ್ಕೆ ಉಪನಗರ ರೈಲು ವಿಸ್ತರಣೆ

Bengaluru - General - Rama Kishan K V

ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆಯ ಕಾರಿಡಾರ್​&4ರ ಕನಕ ಮಾರ್ಗವನ್ನು ಚಂದಾಪುರ ವರೆಗೆ ವಿಸ್ತರಿಸಲು ತೀರ್ಮಾನಿಸಲಾಗಿದೆ.

ಈ ಮೊದಲು ರಾಜಾನುಕುಂಟೆಯಿಂದ ಹೀಲಲಿಗೆ ವರೆಗೆ ಉಪನಗರ ರೈಲು ಯೋಜನೆಯನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿತ್ತು. ಈಗ ಚಂದಾಪುರ ವರೆಗೆ ವಿಸ್ತರಿಸಲಾಗುತ್ತಿದ್ದು, ಯೋಜನೆ ರೂಪಿಸಲಾಗುತ್ತಿದೆ. ಈ ವಿಸ್ತರಣೆಯಿಂದ ಚಂದಾಪುರ ಸಾರಿಗೆ ಹಬ್​ ಆಗಿ ರೂಪುಗೊಳ್ಳಲಿದೆ.

ಈ ಸಂಬಂಧ ಕರ್ನಾಟಕ ರೈಲ್ವೇ ಮೂಲಸೌಕರ್ಯ ಅಭಿವೃದ್ಧಿ ಕಂಪನಿ ನಿಯಮಿತ(ಕೆ&ರೈಡ್​) ವಿಸತ ಯೋಜನಾ ವರದಿ ಸಿದ್ಧಪಡಿಸಲು ಮುಂದಾಗಿದೆ. ಎರಡನೇ ಹಂತದಲ್ಲಿ ಯೋಜನೆ ಕೈಗೊಳ್ಳಲು ಉದ್ಧೇಶಿಸಲಾಗಿದ್ದು, ರೈಲ್ವೆ ಇಲಾಖೆ ಒಪ್ಪಿಗೆ ಸಿಗಬೇಕಿದೆ.

ಹೀಲಲಿಗೆಯಿಂದ ಚಂದಾಪುರಕ್ಕೆ ಕಡಿಮೆ ಅಂತರದಲ್ಲಿದೆ. ಹೀಗಾಗಿ ಮಾರ್ಗ ವಿಸ್ತರಣೆಗೆ ಕೆ&ರೈಡ್​ ಮುಂದಾಗಿದೆ. ಇದರಿಂದ ಬೊಮ್ಮಸಂದ್ರ, ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಸಹಕಾರಿಯಾಗಲಿದೆ.

ಕಾರಿಡಾರ್​-2ರ ಬೈಯಪ್ಪನಹಳ್ಳಿಯಿಂದ&ಚಿಕ್ಕಬಾಣಾವರ ವರೆಗಿನ ಮಾರ್ಗವನ್ನು ಸೋಲದೇವನಹಳ್ಳಿ ವರೆಗೆ ವಿಸ್ತರಿಸುವ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ. ಜತೆಗೆ ಕಾರಿಡಾರ್​-3ರ ವೈಟ್​ಫೀಲ್ಡ್​-ಕೆಂಗೇರಿ ಮಾರ್ಗವನ್ನು ಕೆಂಪೇಗೌಡ ಬಡಾವಣೆ ವರೆಗೆ ವಿಸ್ತರಿಸುವ ಬಗ್ಗೆ ಕೆ-ರೈಡ್​ ರೈಲ್ವೆ ಇಲಾಖೆ ಅನುಮತಿ ಕೇಳಿದೆ.