ಜಿಲ್ಲೆ

ಕೆಪಿಟಿ ಬಳಿ ಸ್ಕೂಟರ್‌ಗೆ ಕಾರು ಡಿಕ್ಕಿ ವೃದ್ಧ ದಂಪತಿ ಗಂಭೀರ

ಹರೀಶ ಎಂ.

ಮಂಗಳೂರು: ನಗರದ ಕೆಪಿಟಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಸ್ಕೂಟರ್‌ಗೆ ಕಾರು ಡಿಕ್ಕಿಯಾಗಿ ವೃದ್ಧ ದಂಪತಿ ಗಾಯಗೊಂಡಿದ್ದಾರೆ.


ಕದ್ರಿ ಕಂಬಳ ನಿವಾಸಿಗಳಾದ ಸೂರ್ಯನಾರಾಯಣ ರಾವ್ (65) ಹಾಗೂ ಅವರ ಪತ್ನಿ ಸವಿತಾ (61) ಗಂಭೀರ ಗಾಯಗೊಂಡವರು. ಇವರು ಸ್ಕೂಟರ್‌ನಲ್ಲಿ ಕದ್ರಿ ಕೆಪಿಟಿ ವೃತ್ತದಿಂದ ಮುಂದೆ ಬಂದು ಹೆದ್ದಾರಿಯಲ್ಲಿ ಎಸ್‌ಕೆಎಸ್ ಪ್ಲಾನೆಟ್ ಅಪಾರ್ಟ್‌ಮೆಂಟ್ ಎದುರಿನಲ್ಲಿ ಯು ಟರ್ನ್ ಹೊಡೆದಿದ್ದಾರೆ. ಈ ಸಂದರ್ಭ ಕೊಟ್ಟಾರ ಕಡೆಯಿಂದ ವೇಗವಾಗಿ ಬರುತ್ತಿದ್ದ ಕಾರು ಸ್ಕೂಟರಿಗೆ ಹಿಂದಿನಿಂದ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರಿನಲ್ಲಿದ್ದ ಪತಿ, ಪತ್ನಿ ಇಬ್ಬರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಸೂರ್ಯನಾರಾಯಣ ರಾವ್ ಅವರ ತಲೆಗೆ ಗಂಭಿರ ಏಟು ಬಿದ್ದಿದೆ. ಪತ್ನಿಗೆ ಕೈ ಕಾಲುಗಳಿಗೆ ಗಾಯವಾಗಿದೆ. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಕದ್ರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.