ಕಾಸರಗೋಡು: ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಸಹಭಾಗಿತ್ವ ಪಿಂಚಣಿ ಯೋಜನೆ ಕೈಬಿಡಲಾಗುವುದು ಎಂಬುದಾಗಿ ಎಡರಂಗ ತನ್ನ ಚುನವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ ಈಡೇರಿಸಲು ಮುಂದಾಗಬೇಕು ಎಂಬುದಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿ(ಡಿಸಿಸಿ)ಅಧ್ಯಕ್ಷ ಪಿ.ಎ.ಫೈಸಲ್ ಹೇಳಿದರು.
ಕೇರಳ ಪ್ರದೇಶ್ ಸ್ಕೂಲ್ ಟೀಚರ್ಸ್ ಅಸೋಸಿಯೇಶನ್(ಕೆಪಿಎಸ್‌ಟಿಎ)ವತಿಯಿಂದ ಜಿಲ್ಲಾ ಶಿಕ್ಷಣ ಉಪನಿರ್ದೇಶಕ(ಡಿ.ಡಿ.ಇ)ರ ಕಚೇರಿ ಎದುರು ನಡೆದ ಪ್ರತಿಭಟನಾ ಧರಣಿ ಉದ್ಘಾಟಿಸಿ ಮಾತನಾಡಿದರು.
ಧರಣಿಗೆ ಪೂರ್ವಭಾವಿಯಾಗಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಕೆಪಿಎಸ್‌ಟಿಎ ಕಂದಾಯ ಜಿಲ್ಲಾಧ್ಯಕ್ಷ ಕೆ.ವಿ. ವಾಸುದೇವನ್ ನಂಬೂದಿರಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಶಶಿಧರನ್ ಪ್ರಧಾನ ಭಾಷಣ ಮಾಡಿದರು. ಕೆ.ಅನಿಲಕುಮಾರ್, ಪ್ರಶಾಂತ್ ಕಾನತ್ತೂರು, ಕೆ.ಶ್ರೀನಿವಾಸನ್, ಅಶೋಕನ್ ಕೋಡೋತ್, ಯೂಸುಫ್ ಕೊಟ್ಯಾಡಿ, ಸ್ವಪ್ನಾ ಜಾರ್ಜ್ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಪಿ.ಟಿ.ಬೆನ್ನಿ ಸ್ವಾಗತಿಸಿದರು. ಕೋಶಾಧಿಕಾರಿ ಜೋಮಿ ಟಿ.ಜೋಸ್ ವಂದಿಸಿದರು. ಜಿಲ್ಲಾ ಅಧಿಕಾರಿಗಳಾದ ಎ.ಜಯದೇವನ್, ಸಿ.ಎಂ.ವರ್ಗೀಸ್, ಪಿ.ಶ್ರೀಜಾ, ಪಿ.ಜಲಜಾಕ್ಷಿ, ಕೆ.ಗೋಪಾಲಕೃಷ್ಣ, ಟಿ.ರಾಜೇಶ್ ಕುಮಾರ್, ಕೆ.ವಿ.ಜನಾರ್ದನನ್, ಎಂ.ಕೆ.ಪ್ರಿಯಾ ವಿಮಲ್ ಅಡಿಯೋಡಿ ನೇತೃತ್ವ ವಹಿಸಿದ್ದರು.