ಸುರಪುರದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ರಾಜನಕೋಳೂರನ ಕಿತ್ತೂರ ರಾಣಿ ಚನ್ನಮ್ಮ ಆಂಗ್ಲ ಮಾಧ್ಯಮ ಶಾಲಾ ಮಕ್ಕಳು. ಪ್ರಾಚಾರ್ಯ ಮಾನಪ್ಪ ಸತ್ಯ, ಮೌನೇಶ ತಳ್ಳಳ್ಳಿ, ಬಸಯ್ಯಸ್ವಾಮಿ ಯಾಳಗಿ, ರಾಜೇಶ್ವರಿ ಹಿರೇಮಠ, ವಿಶ್ವನಾಥ, ಬಸವರಾಜ ಕೋಲಾರ, ಸಂಗನಬಸ್ಸು ಪಂಜಗಲ್ ಇತರರಿದ್ದರು. 
ಜಿಲ್ಲೆ

ಕಿತ್ತೂರ ರಾಣಿ ಚನ್ನಮ್ಮ ಶಾಲಾ ಮಕ್ಕಳು ಜಿಲ್ಲಾ ಮಟ್ಟಕ್ಕೆ

ರಾಜು ಯಮಕನಮರಡಿ

ಕೊಡೇಕಲ್: ಸುರಪುರದಲ್ಲಿ ಇತ್ತೀಚೆಗೆ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದ ಫ್ರೌಢಶಾಲಾ ವಿಭಾಗದಲ್ಲಿ ರಾಜನಕೋಳೂರದ ಕಿತ್ತೂರ ರಾಣಿ ಚನ್ನಮ್ಮ ಆಂಗ್ಲ ಮಾಧ್ಯಮ ವಸತಿ ಶಾಲೆ ಬಾಲಕಿಯರು ಉತ್ತಮ ಸಾಧನೆ ಮಾಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಗುಂಪು ತಂಡದಲ್ಲಿ ಕಬಡ್ಡಿ ಮತ್ತು ೧೦೦ ಮೀ. ರಿಲೇಯಲ್ಲಿ ಪ್ರಥಮ, ೨೦೦ ಮೀ. ಓಟದಲ್ಲಿ ಜಯಶ್ರೀ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರಾಚಾರ್ಯ ಮಾನಪ್ಪ, ಮೌನೇಶ ತಳ್ಳಳ್ಳಿ, ರಾಜೇಶ್ವರಿ ಹಿರೇಮಠ, ಸಂಗಮ್ಮ ರೆಡ್ಡಿ, ಮಹಾದೇವಿ, ಶಿಲ್ಪಾ, ಶ್ರೀದೇವಿ ವಿಶ್ವನಾಥ, ಬಸಯ್ಯಸ್ವಾಮಿ ಯಾಳಗಿ, ಬಸವರಾಜ ಕೋಲಾರ, ಸಂಗನಬಸ್ಸು ಪಂಜಗಲ್, ಮೈಬೂಬ್ ಪಟೇಲ್ ಇತರರಿದ್ದರು.