ಜಿಲ್ಲೆ

ಸ್ವಿಮ್ಮಿಂಗ್‌ನಲ್ಲಿ ಕೌಡ್ಲೆ ಅಕ್ಷರ ಸ್ಕೂಲ್ ದಾಖಲೆ: ಬರೋಬರಿ 26 ಪದಕ ಮುಡಿಗೇರಿಸಿಕೊಂಡ ವಿದ್ಯಾರ್ಥಿಗಳು

ಮದ್ದೂರು: ಮೈಸೂರಿನ ದೆಹಲಿ ಪಬ್ಲಿಕ್ ಸ್ಕೂಲ್‌ನಲ್ಲಿ ಗುರುವಾರ ನಡೆದ ಅಂತರ ಶಾಲಾ ಅಕ್ವಾಟಿಕ್ ‘ಸ್ವಿಮ್ಮಿಂಗ್’ ಚಾಂಪಿಯನ್‌ಶಿಪ್‌ನಲ್ಲಿ ತಾಲೂಕಿನ ಕೌಡ್ಲೆ ಗ್ರಾಮದ ಅಕ್ಷರ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿಗಳು ಬರೋಬರಿ 26 ಪದಕ ಗೆಲ್ಲುವ ಮೂಲಕ ದಾಖಲೆ ಬರೆದಿದ್ದಾರೆ.

ಗ್ರೂಪ್ 1: ಬಾಲಕರ 50 ಮೀ ಫ್ರೀಸ್ಟೈಲ್ ಮತ್ತು 100 ಮೀ ಮಿಡಲ್‌ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಎಸ್.ತನಿಷ್ಕ್(ತೃ), 50 ಮೀ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ವಿಶಾಲ್(ತೃ), 50 ಮೀ ಬಟರ್ ಪ್ಲೈನಲ್ಲಿ ಎಸ್.ತನಿಷ್ಕ್(ದ್ವಿ) ಹಾಗೂ ವಿಶಾಲ್(ತೃ), ಗ್ರೂಪ್ 2: ಬಾಲಕರ 50 ಮೀ ಬಟರ್ ಪ್ಲೈನಲ್ಲಿ ಕೆ.ಎಸ್.ರಕ್ಷಿತ್(ತೃ), ಗ್ರೂಪ್ 3: ಬಾಲಕರ ವಿಭಾಗದ 4*25 ಮೀಟರ್ ಫ್ರೀಸ್ಟೈಲ್ ರಿಲೇಯಲ್ಲಿ ಎಲ್.ಶ್ರೇಯಸ್, ಧನುಷ್, ಭುವನ್, ಪ್ರಣೀತ್(ತೃ), ಬಾಲಕಿಯರ ವಿಭಾಗದ 4*25 ಮೀಟರ್ ಫ್ರೀಸ್ಟೈಲ್ ರಿಲೇಯಲ್ಲಿ ನಿರೀಕ್ಷಾ, ಸಾನ್ವಿ, ಛಾಯಾ, ಬಿಂದು(ತೃ) ಬಹುಮಾನ ಪಡೆದಿದ್ದಾರೆ.

ಗ್ರೂಪ್ 2: ಬಾಲಕರ 4*25 ಮೀಟರ್ ಫ್ರೀಸ್ಟೈಲ್ ರಿಲೇಯಲ್ಲಿ ಕೆ.ಎಸ್.ರಕ್ಷಿತ್, ಪ್ರೀತಂ, ವಿಷ್ಣು, ಲಿಖಿತ್(ದ್ವಿ), ಗ್ರೂಪ್ 1: 4* ಬಾಲಕಿಯರ ವಿಭಾಗದ 25 ಮೀಟರ್ ಫ್ರೀಸ್ಟೈಲ್ ರಿಲೇಯಲ್ಲಿ ಎಸ್.ದೀಕ್ಷಾ, ಸಮೀಕ್ಷಾ, ದೀಕ್ಷಾ, ರಿಶಿ(ದ್ವಿ), ಗ್ರೂಪ್ 1: ಬಾಲಕರ 4*25 ಮೀಟರ್ ಫ್ರೀಸ್ಟೈಲ್ ರಿಲೇಯಲ್ಲಿ ಎಸ್.ತನಿಷ್ಕ್, ವಿಶಾಲ್, ಎಸ್.ಪಿ.ಕಿರಣ್‌ಕುಮಾರ್, ಚಿದಾನಂದನ್(ದ್ವಿ) ಬಹುಮಾನ ಗಳಿಸಿದ್ದಾರೆ. ಪ್ರಶಸ್ತಿ ಗಳಿಸಿದ ವಿದ್ಯಾರ್ಥಿಗಳು ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕರು ಅಭಿನಂದಿಸಿದ್ದಾರೆ.

ಒಲಂಪಿಕ್ ಮಾದರಿ ಈಜುಕೋಳ

ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಅಕ್ಷರ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ಇದೀಗ ಸ್ವಿಮ್ಮಿಂಗ್ ಟೂರ್ನಿಯಲ್ಲಿ ಗೆಲುವಿನ ನಾಗಲೋಟ ಮುಂದುವರೆಸಿದೆ. ವಿಶೇಷವೆಂದರೆ ಶಾಲೆಯಲ್ಲಿ ಒಲಂಪಿಕ್ ಮಾದರಿಯ ಸುಸಜ್ಜಿತ ಈಜುಕೋಳವಿದೆ. ಇದಲ್ಲದೆ ದಕ್ಷಿಣ ಭಾರತ ಮಟ್ಟದ ಸಿಬಿಎಸ್‌ಇ ವಿದ್ಯಾರ್ಥಿಗಳ ಈಜು ಸ್ಪರ್ಧೆಯನ್ನು ಅತ್ಯಂತ ಯಶಸ್ವಿಯಾಗಿ ಆಯೋಜನೆ ಮಾಡಿದ್ದ ಹೆಗ್ಗಳಿಕೆ ಅಕ್ಷರ ಸ್ಕೂಲ್‌ಗಿದೆ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಗುರಿಯೊಂದಿಗೆ ಅಕ್ಷರ ಸ್ಕೂಲ್ ಪ್ರಾರಂಭವಾಯಿತು. ಅದರಂತೆ ಅತ್ಯುನ್ನತ ಸೌಲಭ್ಯ, ಪರಿಣಿತ ಶಿಕ್ಷಕ ವರ್ಗವಿದೆ. ಇದರಿಂದಲೇ ಈಗಾಗಲೇ ಖ್ಯಾತಿ ಪಡೆದುಕೊಂಡಿದೆ. ಪ್ರಸ್ತುತ ಒಂದೂವರೆ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮಂಡ್ಯ ಮಾತ್ರವಲ್ಲದೆ ಅಕ್ಕಪಕ್ಕದ ಜಿಲ್ಲೆ ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿಯುತ್ತಿದ್ದಾರೆ.

ಈಗಾಗಲೇ ನಮ್ಮ ಶಾಲೆ ಶೈಕ್ಷಣಿಕವಾಗಿಯೂ ಅತ್ಯುತ್ತಮ ಸಾಧನೆ ಮಾಡುತ್ತಿದೆ. ಸಿಬಿಎಸ್‌ಇ ಹತ್ತನೇ ತರಗತಿಯಲ್ಲಿ ಸತತ 10ನೇ ಬಾರಿ ಶೇ.100ರಷ್ಟು ಫಲಿತಾಂಶ ಬಂದಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಜತೆಗೆ ಪಠ್ಯೇತರ ಚಟುವಟಿಕೆಗೂ ಆಧ್ಯತೆ ನೀಡಲಾಗುತ್ತಿದೆ. ನಮ್ಮಲ್ಲಿ ಒಲಂಪಿಕ್ ಮಾದರಿಯ ಈಜುಕೋಳವಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಭಾರತ ಮಟ್ಟದ ಸಿಬಿಎಸ್‌ಇ ವಿದ್ಯಾರ್ಥಿಗಳ ಈಜು ಸ್ಪರ್ಧೆ ಆತಿಥ್ಯಕ್ಕೆ ಅವಕಾಶ ನೀಡಲಾಗಿತ್ತು. ಅದನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಲಾಗಿತ್ತು. ನುರಿತ ತರಬೇತುದಾರರು ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ. ಒಂದನೇ ತರಗತಿಯಿಂದಲೇ ಈಜು ತರಬೇತಿ ಕೊಡಲಾಗುತ್ತಿದೆ. ಮೈಸೂರಿನಲ್ಲಿ ನಡೆದ ಟೂರ್ನಿಯಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಡಾ.ಟಿ.ಎನ್.ಧನಂಜಯ ಸಂಸ್ಥಾಪಕ ಅಧ್ಯಕ್ಷರು ಅಕ್ಷರ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್