ಜಿಲ್ಲೆ

ಇಂಜಿನಿಯರಿಂಗ್ ಕೋರ್ಸ್‌ಗೆ ಆಸಕ್ತಿಯೇ ಮುಖ್ಯ

Dharwada - Basavaraj Idli

ಧಾರವಾಡ: ಪ್ರತಿದಿನ ಮನುಷ್ಯ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವುದೇ ಇಂಜಿನಿಯರಿಂಗ್ ಆಗಿದೆ, ಇದನ್ನು ಕಲಿಯಲು ಆಸಕ್ತಿ ಒಂದೇ ಮುಖ್ಯವಾಗುತ್ತದೆ, ಬೇರೆಯವರ ಒತ್ತಾಯ, ಇನ್ನೊಬ್ಬ ಮಾಡಿದ್ದಾನೆ ಎನ್ನುವ ಕಾರಣಕ್ಕೆ ಇಂಜಿನಿಯರಿಂಗ್ ಕೋರ್ಸ್ ಮಾಡುವುದು ಸರಿಯಲ್ಲ ಎಂದು ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ ಸ್ಕೂಲ್ ಆ್ ಇಲೆಕ್ಟ್ರಾನಿಕ್ಸ್ ಆೃಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ಕೌಶಿಕ್ ಮಲ್ಲಿಭಟ್ ಹೇಳಿದರು.

ವಿಜಯವಾಣಿ ಎಜುಕೇಷನ್ ಎಕ್ಸಪೋ ದಲ್ಲಿ ಅವರು, ಇಂಜಿನಿಯರಿಂಗ್ ಕೋರ್ಸ್ ಏಕೆ? ವಿಷಯವಾಗಿ ಮಾತನಾಡಿದರು.

ವಿಜ್ಞಾನ ಹಾಗೂ ಇಂಜಿನಿಯರಿಂಗ್ ಎರಡೂ ಬೇರೆಬೇರೆಯಾಗಿವೆ. ಎರಡನ್ನೂ ಮಿಶ್ರಣ ಮಾಡಬಾರದು. ಹೊಸದನ್ನು ಸೃಷ್ಟಿಸುವುದು, ಕಂಡು ಹಿಡಿಯುವುದು ವಿಜ್ಞಾನ ಅಥವಾ ಸಂಶೋಧನೆ ಎಂದಾದರೆ, ಅದನ್ನು ಮನುಷ್ಯನಿಗೆ ಉಪಯುಕ್ತ ಆಗುವ ರೀತಿ ಬಳಕೆಗೆ ಅನುಕೂಲ ಮಾಡಿಕೊಡುವುದು ಇಂಜಿನಿಯರಿಂಗ್ ಆಗಿದೆ ಎಂದರು.

ಹೀಗೆ ಹಲವು ಉದಾಹರಣೆಗಳ ಸಮೇತ ಇಂಜಿನಿಯರಿಂಗ್ ಕ್ಷೇತ್ರ ಎಷ್ಟೊಂದು ವಿಶಾಲವಾದದ್ದು ಎಂದು ವಿವರಿಸಿದರು. ಡಿಸ್ಕವರ್, ಇನ್ವೆನ್ಶನ್ ಹಾಗೂ ಇನ್ನೋವೇಶನ್ ಈ ಮೂರು ಪದಗಳು ವಿಭಿನ್ನವಾಗಿವೆ. ಇವುಗಳ ಅರ್ಥವೂ ಬೇರೆಯಾಗಿದೆ ಎಂದ ಅವರು ಇನ್ನೋವೇಶನ್ ಕ್ಷೇತ್ರದಲ್ಲಿ ಇಂಜಿನಿಯರಿಂಗ್ ಬೇಕಾಗುತ್ತದೆ ಎಂದರು.

ಕೆಎಲ್‌ಇ: ಹುಬ್ಬಳ್ಳಿ ವಿದ್ಯಾನಗರದಲ್ಲಿರುವ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಮಾಡಬೇಕು ಎನ್ನುವವರಿಗೆ ಇರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.