ಕೊಟ್ಟೂರಿನ ಸಾರ್ವಜನಿಕ ಗ್ರಂಥಾಲಯದಲ್ಲಿ ಮಂಗಳವಾರ ಆಯೋಜಜಿಸಿದ್ದ ಗ್ರಂಥಾಲಯ ಸಪ್ತಾಹದಲ್ಲಿ ಶಿಕ್ಷಣ ಸಂಯೋಜಕ ನಿಂಗಪ್ಪ, ಗ್ರಂಥಾಲಯ ಅಧಿಕಾರಿ ಮಲ್ಲಪ್ಪ ಗುಡ್ಲಾನೂರು, ಬಾಚೇನಹಳ್ಳಿ ಈಶಪ್ಪ, ನಂದಿನಿ, ಸುವರ್ಣ ಇತರರು ಇದ್ದರು.  
ಜಿಲ್ಲೆ

ಓದುವಿಕೆಯಿಂದ ಜ್ಞಾನ ವೃದ್ಧಿ : ಶಿಕ್ಷಣ ಸಂಯೋಜಕ ನಿಂಗಪ್ಪ ಅಭಿಪ್ರಾಯ

Ballari

ಕೊಟ್ಟೂರು: ನಿರಂತರವಾಗಿ ಪುಸ್ತಕಗಳನ್ನು ಓದುವುದರಿಂದ ಜ್ಞಾನಾರ್ಜನೆ, ನೆನಪಿನ ಶಕ್ತಿ ಹೆಚ್ಚಾಗುತ್ತದೆ ಎಂದು ಶಿಕ್ಷಣ ಸಂಯೋಜಕ ನಿಂಗಪ್ಪ ಹೇಳಿದರು. ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ನಿಮಿತ್ತ ಪುಸ್ತಕ ಪ್ರದರ್ಶನ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಬಂದು ಪುಸ್ತಕ ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದರು. ಮುಖ್ಯ ಅತಿಥಿ ದೇವರ ಕೊಳ್ಳದ ಆನಂದ ಇಂದಿನ ಸ್ಪಾರ್ಧಾತ್ಮಕ ಯುಗದಲ್ಲಿ ಡಿಜಿಟಲ್ ಗ್ರಂಥಾಲಯ ಮಹತ್ವದಾಗಿದ್ದು, ಇದರ ಸದುಪಯೋಗವನ್ನು ಪಡೆದುಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು. ಗ್ರಂಥಾಲಯಾಧಿಕಾರಿ ಮಲ್ಲಪ್ಪ ಗುಡ್ಲಾನೂರು, ಪುಸ್ತಕಗಳ ಸಪ್ತಾಹದಲ್ಲಿ ಹೊಸ ಲೇಖಕರು ಮತ್ತು ಪ್ರಕಾಶಕರ ಪುಸ್ತಕ ಪ್ರದರ್ಶನಕ್ಕೆ ಇಡಲಾಗಿದೆ.

ಡಿಜಿಟಲ್ ಗ್ರಂಥಾಲಯದಲ್ಲಿ ಸಾಕಷ್ಟು ಪುಸ್ತಕ ಓದಬಹುದು ಹಾಗೂ ಸ್ಪರ್ಧಾತ್ಮಕ ಪುಸ್ತಕಗಳ ಮಾಹಿತಿಯನ್ನು ಪಡೆಯಬಹುದು ಎಂದರು. ನಂತರ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಬಿ.ಆರ್. ನಂದಿನಿ, ಎ.ಎಂ. ಸುವರ್ಣ, ಗ್ರಂಥಾಲಯ ಸಿಬ್ಬಂದಿ ಶ್ರೀನಿವಾಸ ಪತ್ತಾರ್, ವಿದ್ಯಾವತಿ ಇತರರು ಇದ್ದರು.