ಕೊಟ್ಟೂರು: ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಕನ್ನಡ ರಾಜ್ಯೋತ್ಸವ ಪ್ರಯುಕ್ತ ನ.19, 20ರಂದು ಪಟ್ಟಣದಲ್ಲಿ ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಕೊಟ್ಟೂರು ಹೊಯ್ಸಳ ತಂಡ ಪ್ರಥಮ ಸ್ಥಾನ ಪಡೆದಿದೆ. ಹರಪನಹಳ್ಳಿ ತಾಲೂಕು ಯಲ್ಲಾಪುರದ ಮಾರಿ ಬಾಯ್ಸ ದ್ವಿತೀಯ, ಬಳ್ಳಾರಿಯ ಯಲಿಯಂಗಲಿ ತಂಡ ತೃತೀಯ ಸ್ಥಾನ ಪಡೆದುಕೊಂಡಿದೆ. ವಿಜೇತ ತಂಡದ ಕ್ಯಾಪ್ಟನ್ ಕಿರಣ್‌ಗೆ ವೇದಿಕೆ ಅಧ್ಯಕ್ಷ ಮಂದಾರ ಮಂಜು, ಟ್ರೋಫಿ ವಿತರಿಸಿದರು. ತಂಡದ ಸಹ ಆಟಗಾರರಾದ ಮಂಜು, ದೇವು, ರಮೇಶ ಮುಂತಾದವರಿದ್ದರು.