ಜಿಲ್ಲೆ

ತರಳುಬಾಳು ಹುಣ್ಣಿಮೆ ಪಕ್ಷಾತೀತ ಕಾರ್ಯಕ್ರಮ; ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ವ್ಯಾಖ್ಯಾನ

ಮಹೋತ್ಸವ ನಡೆವ ಸ್ಥಳದ ವೀಕ್ಷಣೆ

ಕೊಟ್ಟೂರು: ತರಳುಬಾಳು ಹುಣ್ಣಿಮೆ ಮಹೋತ್ಸವ ನನ್ನ ವಿಧಾನ ಸಭಾ ಕ್ಷೇತ್ರದ ಪಟ್ಟಣದಲ್ಲಿ ಜನವರಿ 28ರಿಂದ ನಡೆಯುತ್ತಿರುವುದು ನಿಜಕ್ಕೂ ಸೌಭಾಗ್ಯವೇ ಸರಿ ಎಂದು ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಹೇಳಿದರು.

ಕಾರ್ಯಕ್ರಮ ನಡೆಯುವ 105 ಎಕರೆ ಪ್ರದೇಶದ ಸ್ವಚ್ಛತಾ ಕಾರ್ಯವನ್ನು ಶುಕ್ರವಾರ ವೀಕ್ಷಣೆ ಮಾಡಿ, ಸುದ್ದಿಗಾರರ ಜತೆ ಮಾತನಾಡಿದರು. ಇದೊಂದು ಪಕ್ಷಾತೀತ ಧಾರ್ಮಿಕ ಕಾರ್ಯಕ್ರಮವಾಗಿದ್ದು, ಇದು ಇತಿಹಾಸ ನಿರ್ಮಿಸಲಿದೆ. ಈ ಮಹೋತ್ಸವ 9 ದಿನ ನಡೆಯಲಿದ್ದು, ಜ್ಞಾನ ದಾಸೋಹ, ಧರ್ಮಬೋಧನೆಯ ದಾಸೋಹ, ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡೆ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ ಎಂದರು.