ಜಿಲ್ಲೆ

ಬ್ಯಾಂಕ್ ಹೊರಗೆ 1.8 ಲಕ್ಷ ರೂ. ಕಳ್ಳತನ

ಶಾಮಸುಂದರ್ ಕೊಪ್ಪಳಕರ್

ಕೊಟ್ಟೂರು: ಕೊಟ್ಟೂರಿನಲ್ಲಿ ಹಾಡಹಗಲೇ ಬ್ಯಾಂಕ್ ಹೊರಗೆ 1.80 ಲಕ್ಷ ರೂ. ದೋಚಿದ ಘಟನೆ ಬುಧವಾರ ನಡೆದಿದೆ.

ಚಿಕ್ಕಜೋಗಿಹಳ್ಳಿಯ ಜೆಸ್ಕಾಂ ನೌಕರ ಎ.ಕೊಟ್ರೇಶ, ಯೂನಿಯನ್ ಬ್ಯಾಂಕ್‌ನಿಂದ 1.80 ಲಕ್ಷ ರೂ. ತೆಗೆದುಕೊಂಡು ಬಂದು ಪಾಸ್‌ಬುಕ್ ಸಮೇತ ದ್ವಿಚಕ್ರ ವಾಹನದ ಬ್ಯಾಗ್‌ನಲ್ಲಿಟ್ಟು ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ಕೊಟ್ರೇಶಗೆ ಗಮನಕ್ಕೆ ಬಾರದಂತೆ ಬ್ಯಾಗ್‌ನಲ್ಲಿನ ಹಣ ಕದಿಯಲಾಗಿದೆ.

ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ ಹಾಗೂ ಪಿಎಸ್‌ಐ ಗೀತಾಂಜಲಿ ಶಿಂಧೆ ಬ್ಯಾಂಕ್‌ಗೆ ಆಗಮಿಸಿ ಸಿಸಿ ಕ್ಯಾಮರಾ ಪರಿಶೀಲಿಸಿದ್ದು. ಹಣ ಕದಿಯುವ ದೃಶ್ಯ ದಾಖಲಾಗಿದೆ. ಎಸ್ಪಿ ಶ್ರೀಹರಿಬಾಬು ಗುರುವಾರ ಬ್ಯಾಂಕ್‌ಗೆ ಭೇಟಿ ನೀಡಿ ಸಿಸಿ ದೃಶ್ಯ ಪರಿಶೀಲಿಸಿದರು. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.