ಕೊಟ್ಟೂರು: ಮನುಷ್ಯನಿಗೆ ಕಣ್ಣುಗಳು ಅತ್ಯಂತ ಅಗತ್ಯ.ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೆ, ಆಗಾಗ ತಜ್ಞ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಗದ್ದಿಕೇರಿ ಮಠದ ಪಂಚಾಕ್ಷರಿ ಚರಂತಾರ್ಯ ಶ್ರೀಗಳು ಹೇಳಿದರು.
ತಾಲೂಕಿನ ಕೋಗಳಿ ಗ್ರಾಮದಲ್ಲಿ ವಿನಾಯಕ ಹಿರಿಯ ನಾಗರಿಕ ಸಂಘದ 5ನೇ ವಾರ್ಷಿಕೋತ್ಸವ ಹಾಗೂ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಣ್ಣಿನ ಉಚಿತ ತಪಾಸಣೆ ಶಿಬಿರದ ಸಾನ್ನಿಧ್ಯವಹಿಸಿ ಮಾತನಾಡಿದರು.
ಡಾ.ಮಹೇಶ ಮತ್ತು ತಂಡ, ಗ್ರಾಮದ 150 ಜನರ ತಪಾಸಣೆ ಮಾಡಿತು. ಸಂಘದ ಅಧ್ಯಕ್ಷ ಎಚ್.ವೀರಭದ್ರಪ್ಪ, ಉಪಾಧ್ಯಕ್ಷ ಬಿ.ಉಮಾಪತಿ, ಕಾರ್ಯದರ್ಶಿ ಮತ್ತೂರು ಬಸವರಾಜಪ್ಪ, ಖಜಾಂಚಿ ಗಚ್ಚಿನ ಕೊಟ್ರೇಶಪ್ಪ, ವಿ.ಎಂ.ಚಂದ್ರಶೇಖರಯ್ಯ, ಎನ್.ವಿಶ್ವನಾಥ್ ಗೌಡ, ಹೊಂಬಾಳೆ ಕೊಟ್ರೇಶಪ್ಪ, ಮತ್ತೂರು ಮಹೇಶ, ಎನ್.ಗುರುಬಸವನಗೌಡ, ಎಚ್.ಎಂ.ಅಶೋಕಯ್ಯ, ಎಂ. ಶೇಖರಪ್ಪ, ಮೇಘರಾಜ್ ಇತರರಿದ್ದರು.