ಕೊಟ್ಟೂರಿನ ಶ್ರೀ ಕೊಟ್ಟೂರೇಶ್ವರ ಸ್ವಾಮಿ ದೇವಾಲಯವನ್ನು ಸೋಮವಾರ ನಾನಾ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. 
ಜಿಲ್ಲೆ

ಕೊಟ್ಟೂರೇಶ್ವರ ದೇಗುಲಕ್ಕೆ ಪುಷ್ಪಾಲಂಕಾರ- 1 ಲಕ್ಷ ರೂ.ವೆಚ್ಚದ 9 ಕ್ವಿಂಟಾಲ್ ಹೂವುಗಳ ಬಳಕೆ

ಕೊಟ್ಟೂರು: ಕಾರ್ತಿಕ ಮಾಸದ ನಿಮಿತ್ತ ಸೋಮವಾರ ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನವನ್ನು 1 ಲಕ್ಷ ರೂ.ವೆಚ್ಚದ 9 ಕ್ವಿಂಟಾಲ್‌ನಷ್ಟು ನಾನಾ ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಚಿತ್ರದುರ್ಗದಿಂದ ಚೆಂಡು ಹೂವು, ಸೇವಂತಿಗೆ, ಚಿಂತಾಮಣಿಯಿಂದ ಚಂಡುಹೂವು, ಕನಕಾಂಬರಿ, ಮಲ್ಲಿಗೆ ಮತ್ತಿತರ ಪುಷ್ಪಗಳನ್ನು ತರಿಸಲಾಗಿತ್ತು. ಭಾನುವಾರ ರಾತ್ರಿ 9 ಗಂಟೆಯಿಂದ 12 ಜನ ಸೇರಿ ದೇವಾಲಯಕ್ಕೆ ಹೂವಿನ ಅಲಂಕಾರ ಮಾಡಲು ಆರಂಭಿಸಿದ್ದು, ಸೋಮವಾರ ಬೆಳಗಿನ ಜಾವ 5 ಗಂಟೆಗೆ ಮುಕ್ತಾಯವಾಗಿದೆ.

ಕೊಟ್ಟೂರಿನ ಶ್ರೀ ಕೊಟ್ಟೂರೇಶ್ವರ ಸ್ವಾಮಿ ದೇವಾಲಯವನ್ನು ಸೋಮವಾರ ನಾನಾ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು.

ಇಡೀ ದೇವಸ್ಥಾನವೇ ಹೂವುಗಳಿಂದ ಅಲಂಕಾರವಾಗಿರುವುದು ಭಕ್ತರಲ್ಲಿ ರೋಮಾಂಚ ಮೂಡಿಸಿದೆ. ತಂಡೋಪತಂಡವಾಗಿ ದೇಗುಲಕ್ಕೆ ಆಗಮಿಸಿದ ಭಕ್ತರು ಪುಷ್ಪಾಲಂಕೃತ ದೇವಸ್ಥಾನವನ್ನು ಕಣ್ತುಂಬಿಕೊಂಡರಲ್ಲೇ ಸೆಲ್ಫಿ ತೆಗೆಸಿಕೊಂಡು ಖುಷಿಪಟ್ಟರು. ಸುತ್ತಲಿನ ವಾತಾವರಣ ಸುಗಂಧದ ವಾಸನೆಯಿಂದ ಆವೃತವಾಗಿದ್ದು, ಇಡೀ ಪ್ರದೇಶದ ನಿವಾಸಿಗಳಿಗೆ ಸಂತಸ ತಂದಿದೆ. ಪಟ್ಟಣದ ಪಳಾರದ ಅಂಗಡಿ ಬಣಕಾರ ಕೊಟ್ರೇಶ ಮತ್ತು ಸಹೋದರರು ಈ ಸೇವೆ ಸಲ್ಲಿಸಿದ್ದಾರೆ.