ಕೊಟ್ಟೂರಿನಲ್ಲಿ ಪಂಚಾಚಾರ್ಯರ ಯುಗಮನೋತ್ಸವ ಮತ್ತು ಷಷ್ಠಿಪೂರ್ತಿ ಕಾರ್ಯಕ್ರಮದ ಕರಪತ್ರವನ್ನು ಉಜ್ಜಿನಿ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿ ಬಿಡುಗಡೆ ಮಾಡಿದರು. ಚಾನುಕೋಟಿ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ನಂದಿಪುರದ ಮಹೇಶ್ವರ ಸ್ವಾಮೀಜಿ, ಶಾಸಕ ನೇಮಿರಾಜ್ ನಾಯ್ಕ ಇದ್ದರು. 
ಜಿಲ್ಲೆ

ಯುಗಮಾನೋತ್ಸವ ಅದ್ದೂರಿ ಆಯೋಜನೆ

ಕೊಟ್ಟೂರು: ದುಡಿಮೆಯ ಒಂದು ಪಾಲನ್ನು ದಾನ, ಧರ್ಮಕ್ಕೆ ವಿನಿಯೋಗಿಸಿದರೆ ಪುಣ್ಯ ಪ್ರಾಪ್ತಿಯಾಗುವುದರಲ್ಲಿ ಸಂಶಯವಿಲ್ಲವೆಂದು ಉಜ್ಜಿನಿ ಸದ್ಧರ್ಮ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಚಾನುಕೋಟಿ ಆಶ್ರಮದಲ್ಲಿ ಪಂಚಾಚಾರ್ಯರ ಯುಗಮಾನೋತ್ಸವದ ಕರಪತ್ರ ಬಿಡುಗಡೆ ಮಾಡಿ ಗುರುವಾರ ಆಶೀರ್ವಚನ ನೀಡಿದರು. ಯುಗಮಾನೋತ್ಸವ ಮತ್ತು ಚಾನುಕೋಟಿ ಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳ ಷಷ್ಠಿಪೂರ್ತಿ ಕಾರ್ಯಕ್ರಮ ಸುವರ್ಣಾಕ್ಷರದಲ್ಲಿ ದಾಖಲಿಸುವಂತೆ ನಡೆಯಲಿದೆ ಎಂದರು.

ವಿಶ್ವದಲ್ಲಿ ಪಂಚಾಚಾರ್ಯ ಅತಿ ಪ್ರಾಚೀನ ಧರ್ಮವಾಗಿದ್ದು, ಪಂಚಾಚಾರ್ಯರರ ಯುಗಮನೋತ್ಸವ ಬೇರೆ ರಾಜ್ಯಗಳಲ್ಲಿ ಅದ್ದೂರಿಯಾಗಿ ನಡೆದಿದೆ. ಈ ಬಾರಿ ಕೊಟ್ಟೂರಿನಲ್ಲಿ ನಡೆಯುತ್ತಿರುವುದು ನಿಮ್ಮಲ್ಲರ ಪುಣ್ಯ. ಅದ್ದರಿಂದ ನೀವೆಲ್ಲ ತನು, ಮನ ಧನಗಳಿಂದ ಸೇವೆ ಸಲ್ಲಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಉಜ್ಜಿನಿ ಜಗದ್ಗುರುಗಳು ತಿಳಿಸಿದರು.

ಶಾಸಕ ನೇಮಿರಾಜ್ ನಾಯ್ಕ ಮಾತನಾಡಿ, ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಮಠ ಮತ್ತು ಪೀಠಾಧಿಪತಿಗಳಿದ್ದಾರೆ. ಸ್ವಾರ್ಥವಿಲ್ಲದ ಸಮಾಜ ಸೇವೆ ಶ್ರೀಗಳದ್ದಾಗಿದೆ ಎಂದರು. ಜಿಪಂ ಮಾಜಿ ಸದಸ್ಯ ಎಂ.ಎಂ.ಜೆ ಹರ್ಷವರ್ಧನ ಮಾತನಾಡಿ, ಯುಗಮನೋತ್ಸವ ಮಾ.20ರಿಂದ ಏ.3 ರವರೆಗೆ ನಡೆಯಲಿದೆ ಎಂದರು.