ಕೊಟ್ಟೂರು ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ದೇವಾಲಯದ ಬಾಗಿಲಿಗೆ ಬೆಳ್ಳಿ ಕವಚ ಧಾರಣೆ ನಿಮಿತ್ತ ಬೆಳ್ಳಿ ಗಟ್ಟಿಗಳಿಗೆ ಪೂಜೆ ಸಲ್ಲಿಸಲಾಯಿತು. ಧಾರ್ಮಿಕ ದತ್ತಿ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ, ಧರ್ಮಕರ್ತ ಎಂ.ಕೆ. ಶೇಖರಯ್ಯ, ಎಂ.ಎಂ.ಜೆ. ಹರ್ಷವರ್ಧನ, ಮಠದ ಸಿಬ್ಬಂದಿ ಇದ್ದರು. 
ಜಿಲ್ಲೆ

ಕೊಟ್ಟೂರೇಶ್ವರ ಗುಡಿಗೆ ಬೆಳ್ಳಿ ಕವಚ

ಕೊಟ್ಟೂರು: ಪಟ್ಟಣದ ಹಿರೇಮಠದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ದೇವಾಲಯದ ಮುಖ್ಯಬಾಗಿಲಿಗೆ ಬೆಳ್ಳಿ ಕವಚಧಾರಣೆ ಕಾರ್ಯಾರಂಭದ ನಿಮಿತ್ತ ಮಂಗಳವಾರ ಬೆಳ್ಳಿ ಗಟ್ಟಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಕವಚ ತಯಾರಿಸಲು ಬೆಳ್ಳಿಗಟ್ಟಿಗಳನ್ನು ಬೆಂಗಳೂರಿನ ಕುಶಲಕರ್ಮಿ ದೊರೆಬಾಬುಗೆ ಹಸ್ತಾಂತರಿಸಲಾಯಿತು. 1.3 ಕೋಟಿ ರೂ. ಮೌಲ್ಯದ 128.35 ಕೆ.ಜಿ ಬೆಳ್ಳಿಯಿಂದ ಬಾಗಿಲಿಗೆ ಕವಚವನ್ನು ಮೂರು ತಿಂಗಳೊಳಗೆ ಅಳವಡಿಸಲಾಗುವುದು ಎಂದು ದೊರೆಬಾಬು ತಿಳಿಸಿದರು.