child labour 
ಜಿಲ್ಲೆ

ಕೊಟ್ಟೂರುನಲ್ಲಿ ಮೂವರು ಬಾಲ ಕಾರ್ಮಿಕರು ಪತ್ತೆ

ಕೊಟ್ಟೂರು: ವಿಜಯನಗರ ಜಿಲ್ಲಾ ಕಾರ್ಮಿಕರ ಅಧಿಕಾರಿ ಸೂರ್ಯಪ್ಪ ಡೊಂಬರ ಮತ್ತೂರು ಪಟ್ಟಣದಲ್ಲಿ ಶುಕ್ರವಾರ ಮೂರು ಜನ ಕಿಶೋರ ಕಾರ್ಮಿಕರನ್ನು ಪತ್ತೆ ಮಾಡಿದ್ದಾರೆ.

ಪಟ್ಟಣದ ಎಪಿಎಂಪಿ ಹತ್ತಿರ ಗ್ಯಾರೇಜ್, ಹೋಟಲ್, ಅಂಗಡಿಗಳಲ್ಲಿ ಶಾಲೆ ಬಿಟ್ಟು ಕಾರ್ಮಿಕರಾಗಿ ದುಡಿಯುತ್ತಿದ್ದವರನ್ನು ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿದೆ. ಈ ಬಾಲಕರನ್ನು ದುಡಿಸಿಕೊಳ್ಳುತ್ತಿದ್ದವರ ವಿರುದ್ದ ಎಫ್.ಐ.ಆರ್ ದಾಖಲಾಗಿದೆ, ಇವರ ಪಾಲಕರನ್ನು ಕರೆಸಿ ಕಡ್ಡಾಯವಾಗಿ ಶಾಲೆಗೆ ಕಳುಹಿಸುವಂತೆ ತಾಕೀತು ಮಾಡಲಾಗುವುದು ಎಂದರು.

ಸೆ.12ರಿಂದಲೇ ವಿಜಯನಗರ ಜಿಲ್ಲೆಯಲ್ಲಿ ಕಿಶೋರ ಕಾರ್ಮಿಕರ ಪತ್ತೆ ಕಾರ್ಯ ಆರಂಭಿಸಿದ್ದು, ಈಗಾಗಲೇ ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಮರಿಯಮ್ಮನಹಳ್ಳಿ, ಹರಪನಹಳ್ಳಿ ಪತ್ತೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಈ ಪತ್ತೆ ಕಾರ್ಯದಲ್ಲಿ ತಹಶೀಲ್ದಾರ್ ಅಮರೇಶ, ಪಿ.ಎಸ್.ಐ. ಅಬ್ಬಾಸ್, ಕೂಡ್ಲಿಗಿ ತಾಲೂಕು ಕಾರ್ಮಿಕರ ನಿರೀಕ್ಷಕ ಚೇತನ ಕುಮಾರ್ ಹಾಗೂ ಶಿಕ್ಷಣ ಇಲಾಖೆ ಸೇರಿ ಹಲವಾರು ಇಲಾಖೆಯವರು ಇದ್ದರು.