ಪುತ್ತಿಗೆ ಶ್ರೀಗಳ ಕೋಟಿ ಗೀತಾ ಲೇಖನ ಯಜ್ಞದ ಕಚೇರಿಯನ್ನು ಶರವು ದೇವಸ್ಥಾನದ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ ಉದ್ಘಾಟಿಸಿದರು. ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ, ಪ್ರಮುಖರಾದ ಕೆ.ವಿ.ರಮಣ್, ನಿತ್ಯಾನಂದ ಕಾರಂತ ಪೊಳಲಿ, ರಾಘವೇಂದ್ರ ಎಚ್.ವಿ., ಜನಾರ್ದನ ಹಂದೆ ಮೊದಲಾದವರು ಉಪಸ್ಥಿತರಿದ್ದರು.  
ಜಿಲ್ಲೆ

ಕೋಟಿ ಗೀತಾ ಲೇಖನ ಯಜ್ಞ ಯಶಸ್ಸಿಗೆ ಶ್ರಮ, ಮಂಗಳೂರಿನಲ್ಲಿ ಕಚೇರಿ ಉದ್ಘಾಟಿಸಿ ಪ್ರದೀಪ್ ಕಲ್ಕೂರ ಆಶಯ

Mangaluru - Shravan Kumar Nala

ಮಂಗಳೂರು: ಭಗವದ್ಗೀತೆಯ ಮಹತ್ವ ಹಾಗೂ ಶ್ರೀ ಸುಗುಣೇಂದ್ರ ತೀರ್ಥರ ದೂರದರ್ಶಿತ್ವ, ಆಧ್ಯಾತ್ಮಿಕ ಸಾಧನೆ ಉನ್ನತವಾದುದು. ಲೋಕಕಲ್ಯಾಣ ಮತ್ತು ಆತ್ಮವರ್ಚಸ್ಸಿಗಾಗಿ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಹಮ್ಮಿಕೊಂಡಿರುವ ಕೋಟಿ ಗೀತಾ ಲೇಖನ ಯಜ್ಞದ ಯಶಸ್ಸವಿಗೆ ಎಲ್ಲರೂ ಶ್ರಮಿಸಬೇಕು ಎಂದು ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಹೇಳಿದರು.

ಭಾವಿ ಪರ್ಯಾಯ ಪೀಠಾಧಿಪತಿ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರ ಚತುರ್ಥ ಪರ್ಯಾಯದ ಮಹತ್ವಪೂರ್ಣ ಯೋಜನೆ ಕೋಟಿ ಗೀತಾ ಲೇಖನ ಯಜ್ಞದ ಕಾರ್ಯಾಲಯ ಇಲ್ಲಿನ ಕಲ್ಕೂರ ಪ್ರತಿಷ್ಠಾನದ ಕಚೇರಿಯಲ್ಲಿ ಮಂಗಳವಾರ ಉದ್ಘಾಟಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶರವು ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ ಕಾರ್ಯಾಲಯ ಉದ್ಘಾಟಿಸಿ, ಮಂಜೇಶ್ವರ ಮದನಂತೇಶ್ವರ ದೇವಳದ ಆಡಳಿತ ಮೊಕ್ತೇಸರ ತೋನ್ಸೆ ಗಣಪತಿಯವರಿಗೆ ‘ಗೀತಾ ಲೇಖನ’ ಪುಸ್ತಕ ನೀಡಿದರು.

ಯೋಜನೆಯ ಯಶಸ್ಸಿಗೆ ಶ್ರಮಿಸುತ್ತಿರುವ ಪ್ರಮುಖರಾದ ಕೆ.ವಿ.ರಮಣ್, ಹರಿಕೃಷ್ಣ ಪುನರೂರು, ಪ್ರೊ.ಎಂ.ಬಿ.ಪುರಾಣಿಕ್, ನಿತ್ಯಾನಂದ ಕಾರಂತ ಪೊಳಲಿ, ರಾಘವೇಂದ್ರ ಎಚ್.ವಿ., ಜನಾರ್ದನ ಹಂದೆ, ವಿಜಯಲಕ್ಷ್ಮೀ ಬಿ.ಶೆಟ್ಟಿ, ಲೀಲಾಕ್ಷ ಕರ್ಕೇರ, ಸುಧಾಕರ ರಾವ್ ಪೇಜಾವರ, ಸುಮಿತ್ರಾ ಜಿ.ಆಚಾರ್ಯ, ವಂದನಾ ಸುರೇಶ್, ಕಾತ್ಯಾಯಿನಿ ರಾವ್, ಶ್ರೀರಾಮ ಎಸ್.ಆರ್., ರಾಮಕೃಷ್ಣ ರಾವ್, ಚಂದ್ರಶೇಖರ ಮಯ್ಯ, ಶಶಿಪ್ರಭಾ ಐತಾಳ್, ಜ್ಯೋತಿ ಕೃಷ್ಣಾನಂದ, ಲಲಿತಾ ಪೈ ಎಚ್.ಆರ್, ಗೀತಾ ಆಚಾರ್ ಮೊದಲಾದವರು ಉಪಸ್ಥಿತರಿದ್ದರು. ಪೂರ್ಣಿಮಾ ರಾವ್ ಪೇಜಾವರ ವಂದಿಸಿದರು.