ಜಿಲ್ಲೆ

ಲೋಕಸಭೆ ಬಿಜೆಪಿ ಸಚೇತಕರಾಗಿ ಕೋಟ ನೇಮಕ

ಮಂಗಳೂರು: ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಲೋಕಸಭೆಯಲ್ಲಿ ಬಿಜೆಪಿಯ ಸಚೇತಕ(ವಿಪ್) ಆಗಿ ನೇಮಕಗೊಂಡಿದ್ದಾರೆ. ಬಿಜೆಪಿಯ ಸಂಸದೀಯ ಮಂಡಳಿ ಲೋಕಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕರಾಗಿ ಡಾ.ಸಂಜಯ ಜೈಸ್ವಾಲ್ ಹಾಗೂ 16 ಮಂದಿಯನ್ನು ಸಚೇತಕರಾಗಿ ನೇಮಕ ಮಾಡಿದೆ. ಈ ಪೈಕಿ ಕೋಟ ಶ್ರೀನಿವಾಸ ಪೂಜಾರಿ ಅವರು ಸಚೇತಕ ಸ್ಥಾನ ಪಡೆದಿದ್ದಾರೆ.